ಹಾಡಿಗೊಂದು ಕವಿತೆ,,,

ನನ್ನ ಪ್ರೇಮದ ಸಿಂಧುವೇ
ಈ ಕಣ್ಣ ಹನಿಗೆ ಬಂಧು ನೀ
ಯಾಕೀ ಮೌನ ಸಾಕುಮಾಡು
ಒಮ್ಮೆ ಆಲಿಸೋ ಮನದ ಮಾತಾ

ಚಪ್ಪರದ ಹಸಿರು ಹಾಸಿದರೇನೋ
ಬಣ್ಣದ ಚಿತ್ತಾರ ಚಿತ್ರಸಿದ್ದರೇನೋ
ಅಕ್ಷತೆ ಸಿಂಚನಾ ಶಿರದಲ್ಲಿ ಬಿದ್ದರೇನೋ
ಅವನೆಸರ ನನೊಡನೆ ಅಚ್ಚೆ ಒತ್ತಿಸಿದರೇನೋ

ನೋಡು ನಿನ್ನ ಬರುವಿಕೆಗಾಗಿ ಕಾಯುತ್ತಿರುವೆ
ನಿನ್ನವಳು ನಾ ಎಂದಿಗೂ ಇನಿಯಾ ಕಾಣದೆ ನಿನ್ನೀಡಬೇಕಾದ ಸಿಂಧೂರ ಕಾಯುತಿದೆ ಒಡೆಯನ
ನಿನ್ನ ಆಸರೆಯ ಬಯಸಿದೆ ಕೆನ್ನೆಯ ಹನಿ

ಹಸೇಮಣೆಯಲ್ಲೂ ಕಾಯುತ್ತಿರುವೆ
ಉಸಿಯಾಗಿಸದೆ ಬಾ ನನ್ನವನೆ
ತಿಳಿದಿಲ್ಲವೇ ನನ್ನ ನಿನ್ನ ಪರಿಣಯ
ಅಂದೇ ನಡೆದಿದೆ ಸಾಕ್ಷಿಗೆ ಈ ಮನವಿದೆ
ನಿನ್ನವಳ ಕರೆದೊಯ್ಯಲು ಧಾವಿಸು
ನನ್ನ ಪ್ರೇಮದ ಸಿಂಧುವೇ
ಕೊನೆವರೆಗೂ ಕಾಯುವಳು ನಿನ್ನೀ ಅರಸಿ,,, ಬರುವೆ ಅಲ್ಲವೇ?
*************
ಹಸೆಮಣೆ ಏರಿದ ಅವಳ ಮನ ಅವನಲ್ಲಿ ಇರಲು. ಹೇಗೆ ತಾನೇ ಮತ್ತೊಬ್ಬನಿಗೆ ತನ್ನ ಕೊರಳ ನೀಡುವಳು. ಒಂದು ನಂಬಿಕೆಯಲ್ಲಿ ಕೂತು ಕಾಯುತ್ತಿರುವಳು ಅವನ ಬರುವಿಕೆಗಾಗಿ. ಬರುವನೇ ಅವನು?
- ಹಂಸ ಕುಲಾಲ್✍️✍️✍️
- ಹಂಸವೇಣಿ
15 Mar 2020, 03:54 pm
Download App from Playstore: