ಕಲ್ಪನಾ ಕವಿಯ ಬರಹ

ಎದೆಯೋಳಗಡಗಿವೆ ಅದೆಷ್ಟೋ ಪಿಸುಮಾತುಗಳು
ಕಾಣದೆ ಮುಚ್ಚಿಹೋಗಿವೆ ಅದೆಷ್ಟೋ ಸಿಹಿ ನೆನಪುಗಳು
ಕಾಡುತಿವೆ ಪ್ರತಿನಿತ್ಯ ನಿನ್ನ ಸುಂದರ ಕಣ್ಣೋಟಗಳು
ನನ್ನೆದೆಯ ಶಬ್ಧವೇ ಮೌನವಾಗಿಸುವ ನಿನ್ನ ಸಾಂತ್ವನದ ನುಡಿಗಳು
ನಿನ್ನೋಡನೆ ಪ್ರತಿನಿತ್ಯ ಅದೆಷ್ಟೋ ಹುಸಿಮುನಿಸುಗಳು
ನಿನ್ನ ಕಂಡಾಗ ಹಾರುವವು ಎದೆಯಲ್ಲಿ ಬಣ್ಣದ ಚಿಟ್ಟೆಗಳು
ತಂಗಾಳಿಯು ನೀಡುತಿದೆ ನಿನ್ನ ಬರುವಿಕೆಯ ನೀರಿಕ್ಷೆಗಳು
ಕಂಡೋಡನೆ ತನ್ನೆಡೆಗೆ ಆಕರ್ಷಿಸುವ ಹೋಳೆವ ನಯನಗಳು
ನಿನ್ನ ನೆನೆಯುತ ಬರೆದಿರುವೆ ಎಷ್ಟೋ ಕವಿತೆಗಳು
ಪ್ರತಿಕ್ಷಣವು ನಿನ್ನ ನೋಡ ಬಯಸಿದೆ ನನ್ನ ಕಣ್ಣುಗಳು.....❤❤❤

- Chaitra Kulkarni

18 Mar 2020, 02:55 pm
Download App from Playstore: