“«ಪ್ರತಿಬಿಂಬ» ”

ಸೂರ್ಯೋದಯ ಸೊಂಪಾದ ಸೌಂದರ್ಯ
ದಿನದಾರಂಭದ ನವೋಲ್ಲಾಸ
ಕಡಲತೀರದಲಿ ಹಿತವಾದ ಕಣ್ಣೋಟ
ಕುಂಕುಮ ಚೆಲ್ಲಿ ಕೆಂಪಾದ ಕಡಲಾಗಸ
ಸೂರ್ಯಾಸ್ತ ಕೇಳಲಿಂಪಾದ ಔದಾರ್ಯ
ನೇಸರನಿಗೆ ಆಗಸಬಿಟ್ಟ ಸಂತಸ
ಚಂದಿರಗೆ ಸೂರ್ಯನ ಕೊಲ್ಲುವ ಆಟ
ರಕ್ತ ಚೆಲ್ಲಿ ಕೆಂಪಾದ ಕಡಲಾಗಸ

ಕಣ್ಣಿಗೆ ಸೌಂದರ್ಯ ಸವಿದ ಸುಖ
ನೇಸರಗೆ ಉಪಕಾರದ ಸುಖ
ಚಂದಿರಗೆ ಪ್ರತಿಕಾರದ ಸುಖ
ಕಡಲು-ಆಗಸಕೆ ಪ್ರತಿಬಿಂಬಿಸಿದ ಸುಖ

~ಪ್ರವೀpk

- PraVeeN Jpk

08 Jun 2016, 05:35 am
Download App from Playstore: