ಗುಲಾಬಿಯ ಯುಗಾದಿ
ಕೊನೆಗೂ ಬಂದಿಹುದು ಚೆಲುವ ಯುಗಾದಿ,
ತೋರುತ ಮನಕೆ ಮೋದದ ಹಾದಿ,
ಕುಡುಕರಿಂದ ತುಂಬಿ ಕೊನೆಗೆ
ಜೂಜಾಟವ ಕಾಣುವುದು ಬೀದಿ,
ಸವಿಯುವುದು ನಮ್ಮ ಮನವು
ಬೇವು-ಬೆಲ್ಲದ ಸಿಹಿಯ ನದಿ.
ತೊಡಗಲಿ ಮನವು ಇಂದು
ಬೇವು-ಬೆಲ್ಲವ ಬೀರುವಲಿ,
ಎಲ್ಲರ ಜತೆ ಮನದಿಂದ
ಸಂತಸವ ಪಡೆಯುವಲಿ,
ಬೇವು-ಬೆಲ್ಲವ ಸವಿದು
ಮುಗುಳ್ನಗೆಯ ತರುವಲಿ.
ಬೇವೂ ಹೆಚ್ಚಾಗದಿರಲಿ,
ಬೆಲ್ಲವೂ ಹೆಚ್ಚಾಗದಿರಲಿ,
ಎರಡೂ ಸಮನಾಗಿರಲಿ,
ಬಾಳು ಗುಲಾಬಿಯಾಗಲಿ.
- Sunanda bai slv kavana channel
20 Mar 2020, 06:33 pm
Download App from Playstore: