ಪ್ರೀತಿಯೆಂಬುದೇ ಹಾಗೆ
ಎದೆ ನೆಲದಲ್ಲಿ ಹುಟ್ಟಿ
ಕಿಣಿ ಗಜ್ಜೆನಾದದಿ ಕುಣಿದು ಹರಿಣಿಹರಿದು
ಕುಳಿ ಕೆಡವಿ ಕಸವೊಟ್ಟಿ
ಇಳಿದುಹೋಗಿ ಬಿಡುತ್ತದೆ ಜೀವವ ತರಿದು
ತುಟಿ ಅಂಚಿನಲ್ಲಿ ಮೂಡಿ
ಮನಮುಗಿಲಿಗೆ ಬಣ್ಣಬಿಲ್ಲ ಹೊದಿಸಿ
ಉಸಿರನೆ ಮರೆಸಿ ಹಾಡಿ
ತಬ್ಬಲಿ ಮಾಡಿ ಬಿಡುತ್ತದೆ ಮದಿಸಿ
ಕಾತರತೆ ಬಾಗಿಲಲ್ಲಿ ನಿಲ್ಲಿಸಿ
ಕನಸಿನ ಮೊಹಲನೆ ಕಟ್ಟಿಬಿಡುತ್ತದೆ
ಉಟ್ಟ ವಸ್ತ್ರಗಳನೆ ಬಿಚ್ಚಿಸಿ
ದಾರಿ ಇಲ್ಲದೆಲ್ಲಿಗೋ ಅಟ್ಟಿಬಿಡುತ್ತದೆ
ಮೋಹವ ಸದ್ದಡಗಿಸಿ ಇಟ್ಟು
ಹುಳಗೊಳಗೇ ಲೆಕ್ಕಹಾಕಿ ತನೆಳೆಲೆ ಮೆದ್ದು
ಬಾಳಿಗೆಂಬಂತೆ ಗೂಡನಿಟ್ಟು
ಚಿಟ್ಟೆಯಾಗಿ ಹಾರಿಬಿಡುತ್ತದೆ ರೆಕ್ಕೆಹೊದ್ದು
ಸಂತೋಷ್ ನಾಗರತ್ನಮ್ಮಾರ
- samna
20 Mar 2020, 08:17 pm
Download App from Playstore: