ಶಿಲ್ಪಬಾಲೆ
ಕಣ್ಣೆದುರಲ್ಲೆ ರೆಪ್ಪೆ ಮಿಟಕಿಸಿ
ಸಣ್ಣನಗೆ ನೀರ ಚೆಲ್ಲಿ ಮೊಗದ ಅಂಗಳಕಾ
ಕಣ್ಣತುಂಬ ಶಿಲ್ಪಬಾಲೆ ನೆಟ್ಟಿಸಿ
ಮನ ತಿಳಿಗೊಳಕೆ ಸ್ನಾನಕ್ಕಿಳಿದ ಹಂಸಿಕಾ
ನನ್ನೂರ ಬಿರಿದ ಸೇವಂತಿಗೆಯ
ಹೊನ್ನತೇರ ಕಂಪುಕಾರಿ ಕರೆದೆ ಗಿಣಿಕದಿರಾ
ಅಪ್ಪಿಗೆತೋಳ ವೀಣೆತಂತಿಗೆಯ
ಮಿಡಿತಲಿ ಕುಣಿದು ಕೊನರಿಟ್ಟ ಕಣರುದಿರಾ
ಉಬ್ಬು ತಗ್ಗಿನ ಹುಬ್ಬಿಮಳೆಯಲ್ಲಿ
ಮಬ್ಬಾವರಿಸಿ ಕಣ್ಣ ನಿಂತಿಹೆ ಅಡವಿಯೊಳಾ
ಕೊಚ್ಚದಿರು ಹರೆಯ ತೊರೆಯಲ್ಲಿ
ದಬ್ಬು ತೊಪ್ಪೆಯಾಗದಂತೆ ಮುಗಿಲೊಳಾ
ಚಂದ್ರಗುದರಿ ಹತ್ತಿ ತಂಗಾಳಿಯೆ
ರೇಖುಹೆಣ್ಣ ಎದೆಬಾಂದಳಕ ಇಳಿಸಿದ್ಯಾಕಾ?
ಬಿಂದಿಗೆ ಹೊತ್ತ ಕುಂದಣ ಮೀನೇ
ತುಳಕಿ ಹರೆಯ ನನ್ನ ಹಾಳಿಡತೀ ಯಾಕಾ?
- samna
21 Mar 2020, 06:07 pm
Download App from Playstore: