ಅಪ್ಪ...

ನನಗಾಗಿ ಎಲ್ಲ
ನೀನಗೆನು ಇಲ್ಲ
ಕಾಣುವ ತೀರ ನಾನು
ಕಾಣದಿಹ ಕಡಲು ನೀನು
ಸ್ವರಗಳೆ ಸಾಲುತಿಲ್ಲ ನಿನ್ನ ವರ್ಣನೆಗೆ
ಅಕ್ಷರಗಳ ಜೋಡಣೆ ಬಲು ಕಷ್ಟವಾಗುತಿದೆ
ಪುಟಗಳು ಕಣ್ಮಂದೆಯೆ ಮಾಯವಾಗುತಿವೆ
ಲೇಖನಿಗೂ ಕೂಡಾ ಹೆಮ್ಮೆ ನಿನ್ನ ಹೋಗಳಲು
ಪುಸ್ತಕಕ್ಕೂ ಗರ್ವ ನಿನಗಾಗಿ ಬರೆದ ಕವನಗಳನ್ನು ನಾ ಹೋತ್ತಿರುವೆ ಎಂದು
ನಿನ್ನ ಗಡುಸಾದ ಕೈಗಳು ನನ್ನ ತಲೆಯ ಸವರಿದಾಗ ಏನೋ ರೋಮಾಂಚನ
ಇವು ನನಗಾಗಿ ದುಡಿದ ಕೈಗಳೆಂದು
ನಿನ್ನ ಮುದ್ದು ಮುಖ ನನ್ನ ನೋಡಿ ನಕ್ಕಾಗ
ಏನೋ ಆಸೆ
ನನಗಾಗಿ ಏನೋ ತಂದಿರಬಹುದೆಂದು
ನೀ ದುಡಿದು ಸೋತು ಹೋದ ಕಾಲುಗಳ ಮೇಲೆ ನಾ ಮಲಗಿದಾಗ ಏನೋ ನೆಮ್ಮದಿ
ಇದು ನನಗಾಗಿ ಮೀಸಲಿರುವ ಜೋಳಿಗೆಯೆಂದು
ನನಗಾಗಿ ಮೀಸಲಿಟ್ಟ ನಿನ್ನ ಜೀವನಕ್ಕೆ
ನನ್ನುಸಿರ ಕೋನೆವರೆಗೂ ಹೆಸರ ತರುವೆ...

- Chaitra Kulkarni

21 Mar 2020, 08:06 pm
Download App from Playstore: