ಏಳುಸುತ್ತಿನ ಕೋಟೆ

ಏಳುಸುತ್ತಿನ ಕೋಟೆ ಲೈಟ ಬೆಳಕಿಗೆ ಸಿಕ್ಕಿ
ಈಗ ಫಳಫಳನೆ ಹೊಳೆಯುತಿದೆ
ಹಳ್ಳಿ ಸೇವಂತಿ ಘಮಾಡಿಸತವ ಕಂಪನಿಕ್ಕಿ
ದರಕಟ್ಟೆ ಹೂವ್ವ ಮಾರಳೆಯುತಿದೆ

ಕನಕಾಂಬರಿ ಬಿರಿಕಣ್ಣ ತೆರೆದು ಮೌನದಲಿ
ದೇವ ಪಾದದಲಿ ಮಾತ ಸವಿತಿದೆ
ಮನುಜ ಬಟ್ಟೆ ಉಟ್ಟದ್ದು ಬೀಮ ಹಿಡಿಂಬನ ತರಿದದ್ದು
ತಿಪ್ಪೆರುದ್ರ ನ್ಯಾಯತಕ್ಕಡಿ ತೂಗಿದೆ

ಮೌರ್ಯಹೆಜ್ಜೆ ತುಳಿದ ಖಿಣಿ ಖಿಣಿ
ಬೆನ್ನ ಖತ್ತೀಗೆ ಬಲಿ ಕೋಟೆಸಿಂಗ ಮದಕರಿ
ಹೈದರನ ಎದೆಗೆ ಇಟ್ಟು ನಡಕ ಧ್ವನಿ
ಎಸ್ಸೆನ್ನರ ವರ್ಧನ ಬದುಕಿಟ್ಟ ಕೋಟೆಧರಿ

ಕಿಚ್ಚಹಬ್ಬೀ ಸುಬ್ಬರಾಯರ ದುರ್ಗಾಸ್ತಮಾನ
ಕಾಯುತಿಹ  ಓಬವ್ವನ ವನಕೆ ಕಿಡಿಕಾರಿದೆ
ಸೀಳಿ ಅಸಂಸ್ಕೃತಿ ಉಳಿಸುತ ಹೆಣ್ಣಮಾನ
ದುಂಬಿ ಗುಯ್ ಗುಟ್ಟಿದಂತೆ  ಪುತ್ಥಳಿ ನುಡಿದಿದೆ

- samna

27 Mar 2020, 08:49 pm
Download App from Playstore: