ಕೊರೊನಾ
ಕೊರೊನಾ
ಕೊರೊನಾ ನಿನಗೆ
ಕರುಣೆ ಇಲ್ಲವೇ?
ಮಾರಣಹೋಮ ನಡೆಸುತ್ತಿರುವೆ
ಮಂಗಳನ ಅಂಗಳಕ್ಕೆ ಕಾಲಿಡುವ ಕಾಲದಲ್ಲಿ
ಮನೆಯ ಅಂಗಳಕ್ಕೆ ಕಾಲಿ ಡದಂತೆ ಮಾಡಿದೆ
ವಿಶ್ವದೆಲ್ಲೆಡೆ ನಿನ್ನ ಭಯ ಹರಡಿದೆ
ನಿನಗೆ ಕರುಣೆ ಇಲ್ಲವೇ
ಶಾಲಾ ಕಾಲೇಜು ಆಫೀಸ್ ಗಳಿಗೆ ರಜೆ
ಹೊರಗೆ ಬರದಂತೆ ಸಜೆ
ಜನರಿಂದ ದೂರಾಗಿಸಿ ದೇ ಮಜೆ
ನಿನಗೆ ಕರುಣೆ ಇಲ್ಲವೇ?
ಹಾದಿ ಬೀದಿ ಗಳೆಲ್ಲ ಖಾಲಿ
ನಿಂತಿದೆ ಕಾರು ಬೈಕ್ ರೈಡ್ ಜಾಲಿ
ಬಡವರಿಗೆ ಸಿಗದಂತೆ ಮಾಡಿದೆ ಕೂಲಿ
ನಿನಗೆ ಕರುಣೆ ಇಲ್ಲವೇ?
ಭಯ ಭೀತಿಯಲ್ಲಿದೆ ಜನರ ಜೀವನ
ಕೆಮ್ಮಿದರೂ .. ಸೀನಿದರೂ ನೀನಿರುವೆ ಎಂಬ ಅನುಮಾನ
ಹೇ! ಹೆಮ್ಮಾರಿ ನಿಲ್ಲಿಸು ನಿನ್ನ ಯಾನ
ಷೇರು ಮಾರುಕಟ್ಟೆ ಬಿದ್ದೋಗಿದೆ
ಜಗತ್ತಿನ ಆರ್ಥಿಕತೆ ನೆಲಕಚ್ಚಿದೆ
ಅಗತ್ಯ ವಸ್ತುಗಳ ಬೆಲೆ ಗನಕ್ಕೇರುತ್ತಿದೆ
ನಿನಗೆ ಕರುಣೆ ಇಲ್ಲವೇ?
ದೇವಸ್ಥಾನಗಳ ಬಾಗಿಲು ಮುಚ್ಚಿವೆ
ದೇವರು ವೈದ್ಯರ ರೂಪದಲ್ಲಿ ಜನರ ಆರೈಕೆ ಮಾಡುತ್ತಿದ್ದಾರೆ
ನಿನಗೆ ದೇವರ ಭಯವಿಲ್ಲವೇ?
ನಿನ್ನ ನಿಯಂತ್ರಿಸಲು ನಾನಾ ಕಸರತ್ತು
ದೇಶಕ್ಕೆ ಲಾಕ್ ಡೌನ್ ಎಂಬ ಷರತ್ತು
ಕೊ ರೊನಾ ನಿಲ್ಲಿಸು ನಿನ್ನ ಕರಾಮತ್ತು.
lakshman madival
8197706289
http://bit.ly/MookaManasu
- lakshman
28 Mar 2020, 12:05 pm
Download App from Playstore: