ಏನೇಳಲೇಳ ಗೆಳತಿ

ಧರೆಗೆ ಬಿದ್ದ ಪ್ರೇಮದ ಚರಿಗೆ
ಒಡೆದು ಚದುರಿ ಪ್ರೀತಿಯು ಕರಗಿ
ಕವುಚಿ ಬಿದ್ದಿತಲ್ಲೆ ಮನಸು
ಕಳ್ಳ ನೋವ ಕತ್ತಲೆ ನುಂಗಿ!

ಪ್ರೇಮಸೌಧ ಅಂಗಳ ತುಂಬಾ
ಪಾಚಿ ಪರಿಗೆ ಪರಿ ಪರಿ ಮುಳ್ಳ
ಕಾಡಿನಾಗೆ ಕತ್ತೆಯ ಓಟ
ಕಾಲಿನಡಿಗೆ ರಕ್ಕಸ ಮುಳ್ಳ !

ಗಾಳ ಸಿಕ್ಕಿಕೊಂಡ ಗಡವನ ಗಂಟ್ಲು
ಅಕ್ಕಿ ಇರದ ಮನೆಗೆ ನೂರಾರು ನೆಂಟ್ರು
ತೆಕ್ಕೆ ಬಿಗಿದು ಬಿರಿದು ಬೆತ್ತಲೆ ದೇಹ
ಬಿಟ್ಟು ಬದಿಗೊತ್ತಿ ಮತ್ತೆಲ್ಲೋ ಹೊಂಟ್ಲು!

- ಶ್ರೀಗೋ.

08 Jun 2016, 04:28 pm
Download App from Playstore: