_*ಕ್ಷಮಿಸಿಬಿಡು ನಮ್ಮ....*_
ಓ ಪ್ರಕೃತಿ ಮಾತೆಯೇ,
ಕ್ಷಮಿಸಿಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು ಈ ಜಗದ ಎಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ-ಪಕ್ಷಿಗಳ ಕಟ್ಟಿಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ ಜಗವೆಲ್ಲಾ ವಿಕೃತಿಯು...
..... ತಿಪ್ಪೇಸ್ವಾಮಿ.....
- tippu
28 Mar 2020, 02:30 pm
Download App from Playstore: