ನನ್ನ ಮುತ್ತಿನ ಗೆಣೆಕಾರ (ಜನಪದ ಶೈಲಿ)
ನನ್ನ ಮುತ್ತಿನ ಗೆಣೆಕಾರ
ಎತ್ತ ಹೋದೆಯ ಎನ್ನ ಮುತ್ತಿನ ಗೆಣೆಕಾರ
ಇತ್ತ ಸಿಕ್ಕೇನ ಕತ್ತಲ ಬಲೆಯಾಗಾ/ಹೊತ್ಯೊಯ್ಯು ಬಾರ
ಹೊತ್ತು ಮುಳುಗ ಹೊತ್ತೀನ ಒಳಗ
ನೀರ ಒಳಗನ ನಲುಗ ಬಿಂಬಯಾಕ
ಕರಗುತೀಯೊ ಎರಗಲೆ ಒಡೆತಕ್ಕ/ಬಾಳ್ಗೆಳೆಯಾ
ಕರೆದೊಯ್ಯಬಾರ ಇರತೇನ ನಿನ್ನ ಸಂಗ
ಸಕಾರ‍್ದ ಕೆಲ್ಸ ಇರದಿದ್ರ ಏನ; ಹೊಲಕೆಲ್ಸ ಉಂಟಲ್ಲೋ
ತರ್ಕಾರಿ ಬೆಳ್ದು ಹೊತ್ತು ಬಾಳೇನ /ನಂಗೆಳೆಯಾ
ತರ್ಕ ಯಾಕ ಮಾಡತಿ ಕಟ್ಟೋ ತಾಳೀನ
ಹೆತ್ತೋರ ನೆನಪ್ಯಾಕ ಹೆತ್ತೋರಂಗ ಸಾಕತೇನ
ಮುತ್ತು ಮಳೆಚೆಲ್ಲಿ ಸೆರಗ ಮೋಡ ಮುಚ್ಚಿ/ನಂಗೆಳೆಯಾ
ಮುತ್ತೀನ ಹೊಳಿಯಾಗಿ ಉರುಳಿ ಹೊಕ್ಕೇನ
ಕಲ್ಲುಸೀಮೆ ಅಲೆದೆ ಎಲ್ಲು ಸಿಗಲಿಲ್ಲ ನಿನ್ನಂತೋನ
ಎಲ್ಲು ಹೋಗಬ್ಯಾಡ ನಿಲ್ಲು ಎದಿ ಒಳಗ/ನಂಗೆಳೆಯಾ
ಮಲ್ಲೆಯಂಗ ಅರಳಿ ನೆಲ್ಲಂಗ ನಗತೇನ ನಿನ್ನೊಳಗ
ಗಿಣಿಹಾಂಗ ಬಂದೋನ ಎದಿಹಣ್ಣ ಕುಕ್ಕಿದೋನ
ಕನ್ನಡಿ ಹರಳೊಳಗ ಕೆಣಕ್ಯಾವ ನೆರಳ / ಗೆಣೆಕಾರಾ
ಕಣ್ಣೀಗೆ ನಲ್ಲೇ ದಾರಿ ಮರಿತೇನ ಸರದಾರ
ರೊಕ್ಕ ಇದ್ರ ಏನ ರೊಕ್ಕ ಇರದಿದ್ರ ಏನ
ರೆಕ್ಕೆಗೈಯಾಗ ಇರತೀನಿ ತಬ್ಲೀಯಾಂಗಾ/ತಾಯಂತ
ಹಕ್ಕಿಮನೇಯ ಕಟ್ಟಿ ಇಕ್ಕೋ ನನ್ನರಾಣಿಯಾಂಗ
- samna
28 Mar 2020, 06:33 pm
Download App from Playstore: