*_ತಂತ್ರಜ್ಞಾನದಿ ಮೆರೆದ ಜಗ....._*
ತಂತ್ರಜ್ಞಾನದಿ ಮೆರೆದ ಜಗ,
ನಿನ್ನೊಲುಮೆ ಮರೆಯಿತಲ್ಲಾ ಬೇಗ,
ಬಲ್ಲ ಸಮಾಜ ನಿನ್ನ ಕಡೆ ಗಮನ ಕೊಡಲಿಲ್ಲ,
ಅದಕಾಗಿ ನೀ ಅವನ ಕಟ್ಟಿ ಮನೆಯಲಿಟ್ಟೆಯಲ್ಲಾ....
ಸಾಕು ಮಾಡು ನೀ ಅವಗೆ ಕೊಟ್ಟ ಗುದ್ದು,
ಕೆಟ್ಟ ಮೇಲೆ ಬಂದಂತೆ ಬುದ್ಧಿ,
ಇನ್ನಾದರೂ ಅವ ಮೇಲೆ ಬರಲಿ ಎದ್ದು,
ಮುಂದೆಂದೂ ತೋರುತಿರುವ ನಿನ್ನ ಮೇಲೆ ಗೌರವವನ್ನ,
ಮರೆತೂ ಮರೆಯಲಾರ ಪ್ರಕೃತಿ ಮಾತೆ ನಿನ್ನ ಕರುಣೆಯನ್ನ....
.... ತಿಪ್ಪೇಸ್ವಾಮಿ.....
- tippu
29 Mar 2020, 01:53 pm
Download App from Playstore: