ದೂರಸೇ

ನಮ್ಮೊಳಗಿದ್ದಾನೊಬ್ಬ ರಂಕ
ಎಷ್ಟೇ ಹೇಳಿದರೂ ಬಿಡ ನವನು ಬಿಂಕ
ಅಹಂ ತುಂಬಿಕೊಂಡಿದ್ದಾನೆ ಮಂಕ

ಇವನು ಬೆಣ್ಣೆ ತಿಂದ ಕೋತಿ
ಮೇಕೆ ಬಾಯಿಗೆ ವರೆಸಿದಂತವನ ನೀತಿ
ನಾನೇ ಶ್ರೇಷ್ಠ ನೆಂಬ ಭ್ರಾಂತಿ

ಕಂಡದ್ದೆಲ್ಲಾ ...ತನಗೆ ಬೇಕೆಂಬ ಗುಣ
ಮರೆತಿದ್ದಾನೆ ಪ್ರಕೃತಿ ಮಾತೆಯ ಋಣ
ಪ್ರಕೃತಿ ಸಿಡಿದೆದ್ದರೇ ಬೀದಿಯಲ್ಲಿ ನಮ್ಮ ಹೆಣ


ಅವನಿಂದ ಎಚ್ಚರವಾಗಿರಬೇಕು ನಾವೆಲ್ಲಾ
ಪ್ರಕೃತಿಯ ಉಳಿವೇ ನಮಗೆಲ್ಲಾ
ಉಳಿಸದಿದ್ದರೆ ಉಳಿಗಾಲವಿಲ್ಲ!

ಹಾಗಾದರೆ ಇವನ್ಯಾರು ?
ಎಲ್ಲಿಹುದು ಇವನೂರು?
ದುರಾಸೆ, ಸ್ವಾರ್ಥರ ಮನಸೇ ಇವನೂರು.

lakshman. madival.

- lakshman

29 Mar 2020, 09:12 pm
Download App from Playstore: