ಅನುಪಮ...

ನನ್ನ ಕಷ್ಟದಲ್ಲಿ ಸುಖದ ದಾರವನ್ನು ಪೋಣಿಸುವ ಪ್ರೇಯಸಿ
ನನ್ನ ಮನದ ಭಾವನೆಗಳನ್ನರಿತ ಮನದರಸಿ
ನನ್ನೇಲ್ಲಾ ಕೋಪದ ಕ್ಷಣಗಳನ್ನುಕಲಸಿ
ಅದರಲ್ಲಿ ತನ್ನ ಪ್ರೀತಿಯ ನೆನಪುಗಳ ಬೆರೆಸಿ
ಪ್ರತಿ ಸಮಯದಲ್ಲು ನನ್ನ ಯಶಸ್ಸಿಗೆ ಹರಸಿ
ತನ್ನ ಕಹಿ ಕ್ಷಣಗಳನ್ನೆಲ್ಲಾ ಒಂದು ಬದಿಗೆ ಸರಿಸಿ
ನನ್ನ ಪ್ರತಿ ತಪ್ಪುಗಳನ್ನು ಮನಸಾರೆ ಕ್ಷಮಿಸಿ
ಹೃದಯದಲ್ಲಿ ಅಚ್ಚಳಿಯದ ನೆನಪುಗಳ ಚಾಪು ಮೂಡಿಸಿ
ಈಗ ಹೋಗುತ್ತಿರುವಳು ನನ್ನನ್ನು ಹಿಂದಿರುಗಿ ನೋಡದೆ ಅಳಿಸಿ...❤❤❤

- Chaitra Kulkarni

30 Mar 2020, 01:24 pm
Download App from Playstore: