ಅಣ್ಣ ತಂಗಿಯ ಒಡನಾಟ
ಅಣ್ಣನ ಮನವಂದು ಪುಟ್ಟ ಹೂದೋಟ ಅದರೊಳಗೆ ನಗೆ ತಂದ ತಂಗಿ ಎದ್ದೆ ಚಂದದ ಒಡನಾಟ ಅಂದು ಹಕ್ಕಿಗಳ ಹಾಡಂತೆ ನಮ್ಮ ತುಂಟಾಟ ಇಂದು ಸಿಹಿ ತುತ್ತ ನೀಡುತ್ತಿದೆ ಸವಿನೆನಪಿನ ಊಟ ಅವನ ಜೊತೆ ನಾನಿರಲು ನೋವೆಲ್ಲ ಕ್ಷಣದಲ್ಲೇ ಮಾಯದ ಮಾಟ ನಮಗರಿವಿಲ್ಲದೆ ಓಡುತಿಹುದು ಸಮಯದ ಓಟ ತಂಗಿಯ ರಸಭರಿತ ಜೀವನಕ್ಕೆ ಅವನದ್ದೇ ಪಾಠ ಅಣ್ಣನ ಸದ್ಭಾವ ಗುಣಗಳು ಸೃಷ್ಟಿಸಿವೆ ನನ್ನೊಳಗೆ ಮಾನವೀಯ ಮೌಲ್ಯಗಳ ಸ್ನೇಹಕೂಟ ನಂನ ಪ್ರೀತಿ ತುಂಬಿದ ಹೃದಯ ಸಾಮ್ರಾಜ್ಯದ ಸಿಂಹಾಸನದಲ್ಲಿ ಅವನೇ ಸಾಮ್ರಾಟ ಬಾನಂಚು ಬೆರಗಾಗಿ ತೆರೆದು ನೋಡುತ್ತಿದೆ ಅಣ್ಣ-ತಂಗಿಯರ ಮಧುರ ಬಾಂಧವ್ಯದ ಪುಟ ಅಣ್ಣನಿಗೆ ಶರಣಾಗಿ ಇಳೆ ಇತ್ತ ಬೇಡಿ ನೀಡುತ್ತಿದೆ ಜಗ ಸ್ಮರಿಸು ಇತಿಹಾಸ ಸಂರಚಿಸುವ ಖಾಲಿ ಹಾಳೆಗಳ ಸಂಪುಟ.
- nagamani Kanaka
30 Mar 2020, 03:33 pm
Download App from Playstore: