ಸೀತೆಯ ಮನದ ಪ್ರಶ್ನೆ
ನನ್ನೀ ಸ್ವಾಮೀಯ ಪಾದಗಳಿಗೆ ಈ ಭೂಜಾತೆಯ ಪ್ರಣಾಮಗಳು,
ರಘುಕುಲ ತಿಲಕರಿಂದ ಈ ಜಾನಕಿ ಮನದಿ ಅಡಗಿರುವ ಪ್ರಶ್ನೆಗೆ ಉತ್ತರ ಇಂದಾದರೂ ದೊರಕುವುದೇ ಪ್ರಭು ?
ತಾವು ಒಮ್ಮೆ ಆಜ್ಞೆ ನೀಡುವಿರಾ ಸ್ವಾಮೀ ಅಂತರಂಗದ ಜ್ವಾಲಾಮುಖಿಗೆ ಮತಷ್ಟು ಸಮಯ ನೀಡಲು ಮನ ಒಪ್ಪುತ್ತಿಲ್ಲ,
ನನಗೆ ತಿಳಿದಿದೆ ಪ್ರಭು ನನ್ನ ಸ್ವಾಮಿಗೆ ನನ್ನ ಮೇಲೆ ಒಂದಷ್ಟು ಸಂಶಯವಿಲ್ಲವೆಂದು ಆದರೂ ಅಗ್ನಿಯೊಳಗೆ ನನ್ನ ಪ್ರವೇಶವ ವಿರೋದಿಸಲಿಲ್ಲವೇಕೆ ತಾವು ಪ್ರಭು?
ದಶರಥ ಪುತ್ರರಾದ ತಮ್ಮೊಡನೆ ಜನಕನ ಪುತ್ರಿ ಜಾನಕಿ ವನವಾಸದಿ ಹಿಂಬಾಲಿಸಿ ಬಂದಳು, ಆದರೆ ಅಂದು ಲಕ್ಷ್ಮಣನೊಡನೆ ಈ ಜಾನಕಿಯ ಕಳುಹಿಸಿದ್ದೀರಿ ನನ್ನೊಡನೆ ಬರುವ ಮನಸ್ಸು ಇರಲಿಲ್ಲವೇ ನಿಮಲ್ಲಿ ?
ಪ್ರಜೆಗಳ ನುಡಿಗೆ ತಪ್ಪದೆ ನಡೆವ ಆದರ್ಶ, ನಿಷ್ಠಾವಂತ ಪುರುಷರು ನನ್ನ ಸ್ವಾಮೀ, ನನ್ನೀ ನಿಷ್ಠೆಯ ಬಗ್ಗೆ ನಿಮ್ಮ ಮನಕ್ಕೆ ಅರಿವಿರಲಿಲ್ಲವೆ ಪ್ರಭು ?
ನೀವು ತ್ಯಜಿಸಿದ ಕ್ಷಣದಿಂದ ನಿಮ್ಮೀ ನಾಮವೇ ನನ್ನ ಉಸಿರ ಕಣದಿ ಬೆರೆತಿರಲು, ಅದರಲ್ಲಿ ನನ್ನ ತೃಪ್ತಿ ಅಡಗಿ ಹೋಗಿತ್ತು ಸ್ವಾಮೀ. ಆ ದಿನದಿ ಈ ಪ್ರಮೋದಿನಿಯ ಒಮ್ಮೆಯೂ ನೋಡಬೇಕು ಎಂದನಿಸಲಿಲ್ಲವೆ? ಅನಿಸಿದರೂ ನಿಮ್ಮ ದರುಶನ ಭಾಗ್ಯ ಪಡೆಯುವ ಅದೃಷ್ಟಳು ನಾನಲ್ಲವೇನು ಅಲ್ಲವೇ ಸ್ವಾಮೀ ?
ಪ್ರಭು ಜಗತ್ತು ನುಡಿಯುತಿದೆ ಇಂದು ಶ್ರಿ ರಾಮ ಚಂದ್ರ ಜಾನಕಿಯ ತೊರೆದ ಎಂದು ನಿಮ್ಮೀ ಅಂತರಾಳ ಹೇಳುತಿದೆಯಲ್ಲವೇ? ಸೀತೆಯೇ ಈ ರಾಮನನ್ನು ತೊರೆದು ನಡೆದಳೆಂದು.
- ಹಂಸ ಕುಲಾಲ್
- ಹಂಸವೇಣಿ
30 Mar 2020, 05:33 pm
Download App from Playstore: