#ಅಹಮಾಗ್ನಿ#
ಮನದೊಳಗೆ ಮಾಯೆದಿ ಹುಟ್ಟಿ
ಅಹಮಗ್ನಿಯೆಂಬುದು ಎದೆಮೊಗ್ಗ ಸುಡತ
ತನಬಳ್ಳಿಗೂ ಚಾಚು ಉರಿತಟ್ಟಿ
ಉಸಿರ ಬೆರಕಿಲೆ ಉರಿತಿದೆ ಜೀವ ಹಿಂಡತ
ನಗೆಹಕ್ಕಿಯು ರೆಕ್ಕೆಬಡಿವ ಅಣಿ ಇಟ್ಟು
ನೆಮ್ಮದಿ ಕಡಲೇರಲೆ ತಳೆತಿದೆ ಹೊರಹೊಸಿಲಿಗೆ
ಮಮತೆಹರಿಣಿ ಹೊಂಡತಿದೆ ಬಿಟ್ಟು
ಬಯಸಿ ಯಾವದೊ ಶಾಂತವೃಕ್ಷದ ಟಿಸಿಲಿಗೆ
ಉರಿತಾಳದಿಷ್ಟಂದ ಅಂದುಕೊಂಡಿದ್ದೆ
ಆಗಾಗ ಪ್ರೀತನೀರ ಎರಚುತ್ತಿದ್ದೆ ಅಗ್ನಿ ಹಿಂಗತಿಲ್ಲ
ಚಿತ್ತಶಾಂತಕೆ ರೇಖು ಕರಗುತ್ತದೆಂದಿದ್ದೆ
ಎದೆಕಂಬಳಿ ಮುಚ್ಚಿ ಅಪ್ಪಿದರು ಸಹ ಕುಗ್ಗತಿಲ್ಲ
ಕಟ್ಟಿಕೊಂಡ ಭ್ರಮೆಹುತ್ತ ಕೆಡವಿ
ಮನಸ ಸುಡುವದ ಬಿಟ್ಟು ತಳೆಬಾರದೇ ಒಲವೇ?
ಒಳಗಿಗೆ ತೊಟ್ಟು ಬೆಳಗ ಒಡವಿ
ಪ್ರೀತಿತೊರೆಯಾಗಿ ಹರಿಬಾರದೆ ನನ್ನೊಲವೇ?
- samna
30 Mar 2020, 07:05 pm
Download App from Playstore: