ಗೆದ್ದಲು ...
ಬದುಕೆಂಬ ಬಂಡಿಗೆ
ಬಡತನದ ಗೆದ್ದಲು ಹಿಡಿದಾಗ.....
ಎಲ್ಲರೂ ತಿರಸ್ಕಾರ ಭಾವದಿಂದ ನೋಡುವರು.
ಗೆದ್ದಲು ಹೊದ್ದು
ಗೆದ್ದು ಬಂದಾಗ ಪುರಸ್ಕಾರ ಸನ್ಮಾನ
ಕೊಡುವರು.
ಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಬೆನ್ ತಟ್ಟಿ ಪ್ರೋತ್ಸಾಹಿಸಿ
ಅಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಒದ್ದು ಬುದ್ದಿ ಕಲಿಸಿ.
ಹಣ ಹಣ ಎಂದು ಹೆಣವಾಗುವ ಬದಲು
ಗುಣವಂತನಾಗಿ ಬಾಳಲು ಕಲಿ ಮೊದಲು
ಹಣಕ್ಕೆ ಕೊಡುವ ಬೆಲೆ
ಗುಣಕ್ಕೆ ಕೊಟ್ಟರೆ ....
ಈ ಧರೆಯೆ ಸ್ವರ್ಗದ ನೆಲೆ.
- lakshman
30 Mar 2020, 09:47 pm
Download App from Playstore: