ಕೊರೊನಾ ಮಾರಿ

ಕೊರೊನಾ ಮಾರಿಯೆ! ಮಸಣದ ಮಾಯೆಯೆ!
ಯಮನ ಮಗಳೆ! ಸಾವಿನ ಗುತ್ತಿಗೆಧಾರಿನಿಯೇ!
ಮನು ಕುಲದ ಮೇಲೆ ಎಷ್ಟು ಜನುಮಗಳ ದ್ವೇಷ?
ಬಡವ-ಬಲ್ಲಿದ, ದೀನ-ದಲಿತರ ಮೇಲೆ ಏಕೆ ರೋಷ?

ಬಡವರ ಕಷ್ಟದ ಒಂದೊಪ್ಪತ್ತು ತುತ್ತಿನ ಅನ್ನ ಕಸಿದೆ
ಅನ್ನ ಅರಸಿ ಹೋದವರ ಬಾಳಿಗೆ ಬೇತಾಳಿನಿಯಾದೆ
ಹೊಂಚು-ಸಂಚು ಮಾಡಿ ತೋಡಿದೆ ಸಾವಿಗೆ ಖೆಡ್ಡ
ಮಕ್ಕಳು-ಮರಿ, ಮುದಕ-ತದಕರ ಬೀಳಿಸಿದೆ ಅಡ್ಡಡ್ಡಾ

ಏ ಮಾರಿ,
ನೀ ಸೈಲಂಟ್ ಭೂಮರಾಂಗ್ ಕಿಲ್ಲರ್ ಹೇಡಿ
ದಮ್ಮ ಇದ್ರೆ ಎದುರಿಗೆ ಬಂದ ಯುದ್ಧ ಮಾಡು
ನಮ್ಮವರನ ಕೊಲ್ಲಾಲು ನಮ್ಮವರನ್ನೇ ಗುರಾಣಿ ಮಾಡಿ
ನಮ್ಮ ಲಾಕಡೌನ್ ಪ್ಲಾನಗೆ ನೀ ನಡೆ ನಡೆ ನಿನ್ನ ಮನೆಕಡೆ

ಏ ಮಾರಿ...,
ಮಂಗಳನ ಅಂಗಳದಲಿ ರೋಬಟ್ ಇಳಸಿವಿ
ಎಕೆ ೪೭, ಪಿರಂಗಿ ನಳಿಕೆಗಳಿಗೆ ಗುಂಡು ತುಂಬಿವಿ
೧೦೦ ಭಾರಿ ಭೂಮಿ ಸುಡುವಷ್ಷು ಅಣುಬಾಂಬ ಇಟ್ಟಿವಿ
ಒಂದ ಬಾರಿ ನೀ ಕಣ್ಣಿಗೆ ಬಿದ್ರ ಉಡಿಸ ಮಾಡಿಬಿಡತಿವಿ

- Siddugouda

31 Mar 2020, 08:08 am
Download App from Playstore: