ಹುಚ್ಚು ಪ್ರೀತಿ

ಕಾಣದ ಹುಡುಗಿಯ ಅದೆಷ್ಟು ಪ್ರೀತಿಸುವೆ
ಆಕೆಯ ಬಗ್ಗೆ ಅದೆಷ್ಟು ಯೋಚಿಸುವೆ
ಆಕೆ ಎಲ್ಲಿರುವಳೋ ಹೇಗಿರುವಳೋ
ನಿನಗೆ ತಿಳಿಯದಿದ್ದರೂ ಆಕೆಯ ಮನದಲ್ಲಿಟ್ಟು ಪೂಜಿಸುವೆ.
ಕನಸಿನ ಲೋಕದಲ್ಲೇ ತೇಲುತ್ತಿರುವೆ.
ಹೇ ಹುಚ್ಚು ಮನಸ್ಸೇ ಅವಳು
ನಿನ್ನನ್ನು ಸ್ವೀಕರಿಸುವಳೆಂದೂ
ಅದೇಗೆ ಬಲ್ಲೇ ನೀ.
ಕಣ್ಣೆದುರು ಕಂಡು ಪ್ರೀತಿಸಿ
ಜೊತೆಯಲ್ಲಿಯೇ ಸುತ್ತಾಡಿ
ಮೂರು ದಿನದಲ್ಲೇ ಮುಗಿದು ಹೋಗುವ
ಹೆಚ್ಚು ಪ್ರೇಮ ಸಂಬಂಧಗಳ ನಡುವೆ
ಪ್ರತಿದಿನ ಕಣ್ಣಿಗೆ ಕಾಣದವಳ ಕೈಗೆ ಸಿಗದವಳ
ವರ್ಷಕೊಮ್ಮೆ ದರ್ಶನ ನೀಡುವವಳ ಹುಚ್ಚನಂತೆ ಪ್ರೀತಿಸುವೆ
ಮನಸ್ಸೇ ನೀ ಏಕೆ ಹೀಗೆ.

✍️ಕನಸುಗಾರ

- varu

01 Apr 2020, 11:08 am
Download App from Playstore: