ಹರೆಯ ಕದ್ದಾಕಿ ಪ್ರೀತಿರಾಮನಾ

ರೆಪ್ಪೆ ನಸುಕು ಮುಗಿಲಲಿ
ಸಪ್ಪಳಿಲ್ಲದೆ ತೆರೆವ ಕಣ್ಣಸೂರ್ಯನ
ತೆಪ್ಪಹಿಂಡ ಹೊಂಗಿರದಲಿ
ಎರಕ ಇಟ್ಟಾಕಿ ಎದೆಗೆ ಮುತ್ತ ನನ್ನಾ

ತನುವನದ ಜೀಕಡವ್ಯಾಗೆ
ನಗೆತಂಗಾಳಿಯ ನಾಗಸಂಪಿಗೆ ತಂಪಿನಲಿ
ನಡಿಗೆನವಿಲ ನಾಚತಲೆ ಅಟ್ಟಿ
ಹಗಲಸ್ವಪ್ನಕೆ ಮನ ಅಲೆಸಿದಾಕಿ ನನ್ನಾ

ಕೂದಲ ದಟ್ಟ ಕಪ್ಪಿನಲ್ಲಿ
ಮುಖಚಂದ್ರನ ತೇಲಿಬಿಟ್ಟು ಮೆಲ್ಲನೆ
ಕುಪ್ಪೆ ಇಂಗಳ ನೋಟದ ಹಿಟ್ಟಚೆಲ್ಲಿ
ಅರಳಿಸಿದಾಕಿ ಪ್ರೇಮಮೊಗ್ಗ ನನ್ನಾ

ಉಬ್ಬುತಗ್ಗ ಬೆಟ್ಟಕಣಿವೆಯಲಿ
ಅಂದವ ಮಾಯಜಿಂಕೆಯ ಮಾಡಿ
ಹಿಡಿಯಲಿಟ್ಟ ತುಂಟು ಆಟದಲಿ
ಹರೆಯ ಕದ್ದಾಕಿ ಪ್ರೀತಿಯೆಂಬ ರಾಮನಾ

- samna

01 Apr 2020, 11:50 am
Download App from Playstore: