ಹೇ ಕರೋನಾ, ನೀ ಮಾಡಿದ್ದು ಸರಿನಾ ?

ನಗರೀಕರಣವ ಕಡಿಮೆ ಮಾಡಿದೆ ,
ಮಾಲಿನ್ಯವ ಮಟ್ಟ ಹಾಕಿದೆ,
ಹೇ ಕರುನಾ ,ನೀ ಮಾಡಿದ್ದು ಸರಿನಾ ?
ಲಕ್ಷಲಕ್ಷವೆಲ್ಲ ನಿನ್ನೆದುರು ಲಕ್ಷ್ಯವಿಲ್ಲದಾಯ್ತು,
ಭಕ್ಷ್ಯ ಭೋಜನ ಗಳೆಲ್ಲ ಕನಸಿನ ಮಾತಾಯ್ತು,
ಹೇ ಕರೋನಾ, ನೀ ಮಾಡಿದ್ದು ಸರಿನಾ ?
ಮಕ್ಕಳಲ್ಲಿ ಮಮತೆಯ ಬೆಳೆಸಿದೆ ,
ದೇಶ ಬಿಟ್ಟಿದ್ದವರ ಮರಳಿ ಗೂಡು ಸೇರಿಸಿದೆ ,
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
ಅಪಘಾತ ಗಳೆಲ್ಲವೂ ಕಡಿಮೆಯಾಯಿತು ,
ವಿಮೆ ಮೊತ್ತವು ಹಾಗೆ ಉಳಿಯಿತು,
ಜಿಡಿಪಿ ಬಿದ್ದೇಹೋಯ್ತು,ಖಜಾನೆ ಖಾಲಿಯಾಯ್ತು,
ಅಭಿವೃದ್ಧಿ ಕಾರ್ಯ ನಿಂತೇ ಹೋಯ್ತು.
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
@ ಚಿದಾನಂದ ಬಿ ಎಸ್

.,,,

- chidananda chida

04 Apr 2020, 03:19 pm
Download App from Playstore: