ಮಾತಿನ ಮಿತಿ

ಅತಿಯಾದ ಮಾತು
ತಳಹಿಡಿದ ಆಹಾರದಂತೆ
ತಿನ್ನುವುದು ತುಂಬಾ ಕಷ್ಟ
ಆದರೂ ಕೆಲವರು ತಿನ್ನುವರು.

ಅತಿ ಕಡಿಮೆ ಮಾತು
ಉಪ್ಪಿಲ್ಲದ ಆಹಾರದಂತೆ
ತಿನ್ನಲಾಗದೆಂದೇನಿಲ್ಲ
ಆದರೂ ಎಲ್ಲರೂ ತಿನ್ನಬಹುದು.

ಹಿತಮಿತವಾದ ಮಾತು
ರುಚಿಕರವಾದ ಆಹಾರದಂತೆ
ಹೊಟ್ಟೆ ತುಂಬುವಷ್ಟು
ತಿಂದು ತೇಗಬಹುದು..

- ಅಕ್ಷತ

05 Apr 2020, 10:21 am
Download App from Playstore: