ಮನವ ಕರಗಿಸಿದ ಮಲ್ಲಿಗೆ ಹೂ

ನಗು ಮರೆತ ತುಟಿಗಳ ಮಧ್ಯ ಕಂಡಿತು ಮುಗುಳು ನಗೆ
ಉತ್ಸಾಹದ ಚೆಲುಮೆ ಚಿಗುರಿತು ಬದುಕಿನ ಪುಟದಲ್ಲಿ
ಮರಿಚಿಕೆಯಾದ ಸಂತೋಷದ ಕ್ಷಣ ಮರಳಿ ಬಾಳಿಗೆ ನೀ ತಂದು ಕೊಟ್ಟಿ ಚೆಲುವೆ ॥

ಪ್ರೀತಿ ಅರಿಯದ ಮನಸ್ಸಲ್ಲಿ ಅರಳಿಸಿದೆ ಒಲವಿನ ಒಲುಮೆ
ಸ್ನೇಹ ಬಾಂಧವ್ಯದ ಹೊಸ ಬದುಕಿಗೆ ನಿನಾದೆ ಮುನ್ನುಡಿ
ನವ ಕನಸಿಗೆ ಬಳೆದೆ ಕಾಮನ ಬಿಲ್ಲಿನ ರಂಗೂ
ಜೀವಕ್ಕೆ ಹೊಸ ಜೀವನ ನೀಡಿದೆ ಅಂಧಕಾರದ
ಹೊಂಬಿಸಿಲಿನ ಹೂವೇ ॥

ಸಂಬಂಧಗಳ ಹೂದೋಟದಲ್ಲಿ ಅರಳಿತು ಪ್ರೀತಿಯ ಮೊಗ್ಗು
ಕನಸು ರಂಗೇರಿತು, ಮನಸ್ಸು ಹುಚ್ಚೆದಿತು,
ಆಸೆ ಮುಗಿಲೆರಿತು, ಜೀವ ಹೂವಾಯಿತು,
ಬದುಕಿನ ಜ್ಯೋತಿ ಬೆಳಗಿಸಿದ ಕೋಮಲೆ
ಮನವ ಕರಗಿಸಿದ ಮಲ್ಲಿಗೆ ಹೂವು ನಿನಾದೆ ॥
❤❤❤

ಡಿ ಜೆ ವಿಶಾಲ
7996014212

- Vishal Hiremath

05 Apr 2020, 10:36 am
Download App from Playstore: