ಗಮ್ಯ
ಸಾಗುತಲಿಹ ಪಥವದು
ದುರ್ಗಮವಿಹುದು
ಸಾಧನೆಯ ಶಿಖರದೆಡೆಗೆ
ಸಾಗುತಲಿಹುದು
ಅಂಜಿಕೆಯೇಕೆ ಅಳುಕಿನ್ನೇಕೆ
ಕಾಲೆಳೆವವರ ತಳಮಳವೇಕೆ
ಕನಸೇ ಇರದ ಬದುಕಿನ್ನೇಕೆ
ಗುರಿ ತಲುಪಿದೊಡೆ ಹಾಕು ಕೇಕೆ
ಬೆದರಿ ಬಳಲಿ ಬಿಕ್ಕುತಲಿಹ
ಮನವದು ನೋವಲಿ ಬೇಯುವುದು
ಬಿರಿಯದ ಕುಗ್ಗದ ಒತ್ತಡಕ್ಕಳುಕದ
ಮನವದು ಜಯವನು ಕಾಣುವುದು
@ಕಂಪಾ
- KN PATIL
06 Apr 2020, 04:17 pm
Download App from Playstore: