ಕೃಷ್ಣ ಪೊರೆವನಾ

ಕಟ್ಟಿ ಕರೇವ
ಕಾಮಧೇನ ಕೊಟ್ಟಿಗೆ ತುಂಬಿ
ಕೈತೋಳಿಬೇಕ ನೀ ಹಾಲುತುಪ್ಪದೊಳಗಾ
ತಪ್ಪ ಬಾರದು ನೋಡಾ

ಹಾಲುಂಡ
ತನುವಲ್ಲಿ ಶಕ್ತಿಯೆ ತುಂಬಿ
ಎದೆ ತಳೆಬೇಕ ಅಮೃತಬಿಂದಾ
ಇಸ ಸುಳಿಕೂಡದು
ಕಂದ ನೀ ಕಾಣಾ

ಕಲ್ಲು ಕೊಣಚ
ಕೃಷ್ಣ ನಿರುವನ ಎಲ್ಲದಕಾ
ಕರ್ಮ ನೀ ಎಸಗು ಕಮಟು ಕರಗಿ
ಫಲಹೊತ್ತು ತರುವನಾ
ಶ್ರೀ ರಂಗನು

ತಡೆಗೋಡೆ
ಕೆಡವಿ ನುಗ್ಗು ಎಡರೇನೆ ಬರಲಿ
ಇಡದಿರು ನೆಲಕೆ ಮುಗ
ಮೈಬಗ್ಗಿಸಿ
ಕಾಯಕದೇವಗೆ ಶರಣಾಗು
ಹಸುವಾಗಿ ಪೊರೆವನಾ
ದೇವ ನಿನ್ನನು

- samna

06 Apr 2020, 04:29 pm
Download App from Playstore: