ಕನ್ನಡ
ಓ ಮನವೇ ಚೈತನ್ಯ ತುಂಬಿ
ಕನ್ನಡಾಂಬೆಯ ಹೆಮ್ಮೆಯ ಪುತ್ರನು ನೀನಾಗು
ಉತ್ತರ , ದಕ್ಷಿಣ , ಮಧ್ಯೆ , ಕರಾವಳಿ ಏನ್ನದೇ
ಹೈದರಬಾದ್ , ಮುಂಬೈ ಕರ್ನಾಟಕ ಏನ್ನದೇ
ಎಲ್ಲವನ್ನೂ ಒಗ್ಗೂಡಿಸುವ ಕನ್ನಡದ ಕಟ್ಟಾಳು ನೀನಾಗು
ಅಕ್ಕಡ , ಎನ್ನಡ ,ಎಕ್ಕಡ , ಬಯ್ಯ ಎನ್ನದೇ
ಕನ್ನಡ ಮರೆತು ಸತ್ತಿಂತಿಹೀರ ಕನ್ನಡಿಗರನ್ನು ಬಡಿದೆಬ್ಬಿಸಿ
ಕನ್ನಡಾಂಬೆಯ ಸಿಂಗರಿಸುವ ಧೀರ ಕನ್ನಡಿಗಾನು ನೀನಾಗು
ಕುಲವೆನದೇ ಜಾತಿ ಧರ್ಮವೆನದೇ ಕನ್ನಡ ಕಟ್ಟುವ ಕಟ್ಟಾಳು ನೀನಾಗು
ಶರಣ ದಾಸರು , ಸಂತರು ,ಸಾಹಿತಿಗಳ ಕನ್ನಡಾಭಿಮಾನಿ ನೀನಾಗು
ವಿಶ್ವಕ್ಕೆ ಕನ್ನಡದ ಹಿರಿಮೆಯ ಸಾರಿದ ಸಾಧಕರ ಹಿಂಬಾಲಕನು ನೀನಾಗು
ಜೋಗದ ಸಿರಿ ,ಬೇಲೂರು ಶಿಲೆಯಲ್ಲಿರುವ ಕಲೆ
ಮುತ್ತು ರತ್ನಗಳ ಮಾರಿದ ನೆಲೆ
ಅಂಬಾರಿಯ ಗತ ವೈಭವ ಕಡಲತೀರದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಸಾರುವ ಕನ್ನಡಾಂಬೆಯ ಮಗನು ನೀನಾಗು
ಎಲ್ಲೆ ಇರು ಹೇಗೆ ಇರು ಕನ್ನಡದ ಕೀರ್ತಿ ಪಾತಕೆ ಹಾರಿಸುವ ಕನ್ನಡಿಗನು ನೀನಾಗು
ವಿಶ್ವ ಸಾಧಕರಲ್ಲಿ ನೀನೊಬ್ಬ ಸಾಧಕನಾಗಿ
ಕನ್ನಡನಾಡ ಸಿರಿಯ ಸ್ವೂರ್ತಿ ಚಿಲುಮೆಯು ನೀನಾಗು
ಓ ಮನವೇ ಚೈತನ್ಯ ತುಂಬಿ
ಕನ್ನಡಾಂಬೆಯ ಹೆಮ್ಮೆಯ ಪುತ್ರನು ನೀನಾಗು.
- ಎ ಜಿ ಶರಣ್
10 Jun 2016, 07:52 am
Download App from Playstore: