ತಾಯಿ ಮತ್ತು ಪ್ರಕೃತಿ
ಹೆಜ್ಜೆ ಗಳು ನೆಡೆದ
ಹನಿ ಹನಿಯ ಕುರುಹಿನ ದಿಬ್ಬಣ...
ನಟ್ಟನಡು ಹಡೆದ
ಬಾನೊಳ ಮೂಡಿಹ ಮೂಢಣ...
ಚೇಳಗುಡ್ಡದ ಮೇಲೆ
ಚೇಷ್ಟೆಗಾಳಿಯಲಿ ತೇಲತಿಹ ಮಾತು
ಹಕ್ಕಿಮೊರೆತದ ಮೇಳ
ಇಕ್ಕಿಹೋಯಿತ ಮನಕ ಮೆಲ್ವಾತು
ಬಿಂದಿ ಕಂಕಳಲೆ ನೆಟ್ಟಗೆ
ಏರತ್ತಿದ ಬ್ರತುಕು ನೀರಡಕಿದ ಗುರುತು
ಗೋಕಟ್ಟೆ ಮಣ ಕಟ್ಟಿಗೆ
ನೆತ್ತಿಗೆ ಹೊತ್ತಪರಿ ಬಡ್ಡೆಕಲ್ಲದು ಹೇಳಿತು
ಗಿರಿಶಿಖರ ಸ್ನೇಹದಲೆ
ಬೆಳೆದ ಜೀವ ಕಾನನದ ಕವುಜದಂತೆ
ಮುಗ್ಧತೆಯ ಕಡಲಲೆ
ಪ್ರೀತೀ ಅಲೆಗಳಿಡಿಸಿ ಕರುಳ ನಿರಂತರ
ಹಕ್ಕಿಯಾಗಿ ಹಾರುರೆಕ್ಕೆ
ಬಿಚ್ಚಿದ ಸ್ವಚ್ಛಂದದ ಒಂದು ಮುಗಿಲು
ಕೆಂಗಲ ನುಂಗುಬಿಸಿಲ
ಬಗ್ಗಿಸಿದ ಕಾಯಕಕೆ ಅದೊಂದು ದಿಗಿಲು
ದೇವರಗುಡ್ಡದಿ ಅಲೆವ
ಗಾಳಿಯಂತೆ ತಿರುಗಿ ಕಾಯ್ದ ಹಸುಹಿಂಡು
ಕಣ್ಣಿಗೆ ಬೆಳ್ಳಕ್ಕಿ ಸಾಲಂತೆ
ಬೆಟ್ಟದಡಿ ಊರಿಗೆ ವಿಸ್ಮಿತ ಕಣ್ಣ ಗಂಡು
ಮುಗಿಲೆ ಕರಗಿ ಮಳೆಯ
ಸುಯ್ಲ ತೊಯ್ಯತ ಹನಿ ಹನಿಯ ಬೊಗಸೆಗೆ ತೂಗಿ
ಆನಿಕಲ್ಲ ಹಿಡಿದು ನುಂಗುತ
ಮಳೆಗೆಳತಿಯ ಕೂಡಾಡಿದ ಪ್ರಕೃತ
ಸರಿಕರೆದುರ ಗೌರಿ
ಹಿರಿಕರ ಮುಂದೆ ರತ್ನೆಯಂತೆ ಓರಗೆತನಕೆ ಇಂದ್ರೆಯಂತೆ
ಸ್ವಾಭಿಮಾನ ತಡೆವಿದರೆ ನಾಗೆಯಂತೆ
ಹಳ್ಳ ಹರಿಸಿದ ಹೆಜ್ಜೆ ನೆನಪ ದೇವತೆ
- samna
10 Apr 2020, 03:46 pm
Download App from Playstore: