ಸಣ್ಣ ಹೃದಯದ ಮಾತು : ❤❤

ನಂಬಿಕೆ ಹರಡಲಿ
ವಿಶ್ವಾಸ ಬೆಳಗಲಿ
ದ್ವೇಷವೆಂಬ ಕತ್ತಲು ಸರಿದು
ಪ್ರೀತಿಯ ಬೆಳಕು ಹರಿಯಲಿ.....

ಸಹೋದರತೆ ಹರಡಲಿ
ವಾತ್ಸಲ್ಯತೆ ಬೆಳಗಲಿ
ಜಾತಿವಾದವೆಂಬ ಕತ್ತಲು ಸರಿದು
ಮಾನವೀಯತೆಯ ಬೆಳಕು ಹರಿಯಲಿ.....

ಧರ್ಮ ಹರಡಲಿ
ನ್ಯಾಯವು ಬೆಳಗಲಿ
ಭ್ರಷ್ಟತೆ ಎಂಬ ಕತ್ತಲು ಸರಿದು
ಅಭಿವೃದ್ಧಿಯ ಬೆಳಕು ಹರಿಯಲಿ.....

ಆತ್ಮ ವಿಶ್ವಾಸ ಹರಡಲಿ
ಆಶಾ ಜ್ಯೋತಿ ಬೆಳಗಲಿ
ಅಜ್ಞಾನವೆಂಬ ಕತ್ತಲು ಸರಿದು
ವಿಜ್ಞಾನದ ಬೆಳಕು ಹರಿಯಲಿ.....

ಇಂತಿ ನಿಮ್ಮ ಗೆಳೆಯ :
ಡಿ ಜೆ ವಿಶಾಲ

- Vishal Hiremath

10 Apr 2020, 08:15 pm
Download App from Playstore: