ಸಂಬಂಧಗಳ ಬೇಡಿಯೊಳಗೆ

ಹಾರಾಡಿದ ಕನಸು
ಮುದುಡಿ ಮಲಗಿದೆ
ಕೊನೆ ಮೊದಲಿಲ್ಲದ
ಈ ಬದುಕಿನಲಿ

ಬಂದಿಯಾಗಿಹ ಭಾವ
ಕಾಡುತಿದೆ ಇಂದು
ಸೆರೆಯಿಂದ ಹೊರಗೆ
ಬರುವ ಬಾಗಿಲೆಲ್ಲಿದೆ

ಸಂಬಂಧಗಳ ಬೇಡಿಯೊಳಗೆ
ಬಿಗಿದಿರುವೆ ಕೊಂಡಿಯಾಗಿ
ಅದರೂ ಹೊರ ಬರುವೆ
ಬರುವ ಬಾಗಿಲೆಲ್ಲಿದೆ


ಮುಖವಾಡ ಯಾಕಿನ್ನು
ಮೂರು ದಿನದಿ ಜೀವಕೆ
ರೆಕ್ಕೆ ಮೂಡಿದರೆ
ಹಾರುವ ಮತ್ತೆ, ಇಲ್ಲವಾದರೆ .....ತ್ತೆ

- suresh veera

10 Apr 2020, 10:46 pm
Download App from Playstore: