ಪ್ರಬುದ್ಧ ರಾಮ

ಶತಮಾನದ ಕಾಳಕತ್ತಲೆಯ ಹೆಣ ಉರುಳಿ
ಬೆಳಕದು ಬೆತ್ತಲಾದರು ನಿಲ್ಲತಿಲ್ಲ ನನ್ನ ಜನರ ಭ್ರಮೆ
ಹುಟ್ಟಿಲ್ಲದಾಗಿದೆ ನೆಡೆದ ಹಾದಿ ಸುತ್ತಿಸುರುಳಿ
ಮೈತೊಳೆದು ನಿಂತಿದ್ದಾನೆ ಈಗ ಸ್ವಚ್ಛಂದ ಬುದ್ಧ

ಕಡಲಾಚೆ ನೆಲ ಸುತ್ತಿ ಎದೆನೆತ್ತರ ಒಳಿತೆತ್ತಿ
ವಿಧಿಗಳೆಂಬ ಹೋರಿಯ ಕಟ್ಟಿ ಕಟ್ಟಳೆನೇಗಿಲ ಹರಿಸಿ
ಕೊರೆದೆ ತಮದ ಗರ್ಭ ಜ್ಞಾನಬುಗ್ಗೆ ಎತ್ತಿ
ಕರಡು ಸಂವಿಧಾನದಿ ಒಳದ್ವನಿಯಾಗಿಟ್ಟೆ ಮೊರೆಸಿ

ಶಿಲ್ಪಿ ನೀನಾದೆ ಕಲ್ಪಕಲ್ಪಗಳನೆ ಕಟೆದ ಅಪರಂಜಿ
ಬುದ್ಧಬಸವಪುಲೆ ಅಟೆಲ್ ಜೀ ಈಗ ಅಚ್ಚಿಗಿಟ್ಟ ಅಕ್ಷರ
ಸಮತೆ ಸ್ವತಂತ್ರ ಸೋದರತೆ ನೆಲದ ಕಾರಂಜಿ
ಇದೊ ನವ ಇನೋದಯ ಮೂಡಣದಿ ಗೋಚರ

ತೊಯ್ಯತಿಲ್ಲ ಕಿರಣ ಭರತ ಭುವಿತೇರ
ಕೇಳತಿಲ್ಲ ಸಮತೆಕೂಗು  ನಿಂತಿಲ್ಲ ಹಣದ ಸೋಗು
ಒಳಜಾಲದ ಸುಳಿಗತ್ತಲಲಿ ಗೋಳಿಡಿತ ಪೂರ
ಹತ್ತಿದೆ ನ್ಯಾಯದ ಬೇಲಿಗೆ ಗಾಢನಿದಿರೆ ತೂಗು

ಈಗಲು ಕಾಯುತ್ತಿದ್ದೇನೆ ಮೀರದೆ ನಿನ್ನದಾರಿ
ಪ್ರಬುದ್ಧರಾಮ ಹಚ್ಚಿಕೊಟ್ಟ  ಚಿಕ್ಕದೊಂದು ಹಣತೆ ಹಿಡಿದು
ಶಿಕ್ಷಣಸಂಘಟನೆ ಹೋರಾಟಗಳ ಅಸ್ತ್ರತೋರಿ
ಹಚ್ಚೇ ಹಚ್ಚುತ್ತೇನೆ ಸಮತೆಬೆಳಕ ಪಂಜ ಹಿಡಿದು

- samna

14 Apr 2020, 11:12 pm
Download App from Playstore: