ಅಳಿಯಲಿ ಅಸಮಾನತೆ
ಜಾತಿ ಜಾತಿಗೆ ಒಂದೊಂದು ಬೀದಿ ಊರಿನಲಿ
ಗುಡಿ, ಮಠ, ಶ್ಮಶಾನಗಳು ಜಾತಿಗಳ ಹೆಸರಲಿ
ಮಡಿವಂತಿಕೆಯ ನೆಪದಲ್ಲಿ ಕಟ್ಟಿಹರು ಬೇಲಿ
ಕುರುಡು ನಂಬಿಕೆ ಸಾಕು ಶೋಷಣೆ ಅಂತ್ಯವಾಗಲಿ
ಮನುಷ್ಯ ಮನುಷ್ಯನ ನಡುವೆ ಏಕೆ ಅಂತರ
ಸಾಕು ಈ ಜಾತಿ, ಮತ, ಧರ್ಮಗಳ ಅಬ್ಬರ
ಅಳಿದು ಹೋಗಲಿ ಅಸಮಾನತೆಯ ಕಂಧರ
ಕತ್ತಲೆ ಸರಿದು ಬೆಳಗಲಿ ಜಗವು ನಿತ್ಯ ನಿರಂತರ
ಮನಸ್ಸು ಮನಸ್ಸುಗಳಲ್ಲಿ ಭಾವೈಕ್ಯತೆ ಮೂಡಲಿ
ಮೇಲು, ಕೀಳೆಂಬ ಭೇದ ಭಾವವು ಅಳಿಯಲಿ
ಎಲ್ಲರೂ ಒಂದಾಗಿ ಮಾನವೀಯತೆ ಉಳಿಯಲಿ
ನಾವೆಲ್ಲರೂ ಒಂದೇ ಈ ಸೃಷ್ಟಿಯ ನಿಯಮದಲಿ
ಮಾತು ಮಾತಲ್ಲಿ ಜಾತಿ ವಿಷಕಾರುವವರು
ಸಮಾಜ ಒಡೆದು ಅಸ್ತಿತ್ವ ಉಳಿಸಿಕೊಳ್ಳುವರು
ಬೇಡ ಜಾತಿಗೊಂದು ಪಕ್ಷ, ಜಾತಿಗೊಬ್ಬನಾಯಕರು
ಒಂದೇ ಕುಲ, ಒಂದೇ ನೆಲ ಎಲ್ಲರೂ ಸಮಾನರು
- Tribhuvan
15 Apr 2020, 02:10 am
Download App from Playstore: