ನಾಟಕದ ಬದುಕು
ಹೇ ಮನವೆ ನೀ ಏಕೆ
ಅಳುತಿರುವೆ ಒಂಟಿಯಾಗಿ
ನಿನ್ನ ಒಂದು ಮುಗ್ದ ನಗುವ
ನೋಡಲು ಕಾದು ಕುಳಿತಿಹವು
ಅದೆಷ್ಟೋ ಕಣ್ಗಳು.
ಇನ್ನೊಬ್ಬರ ಖುಷಿಗಾಗಿ ನೀ
ನಗು
ನಿನ್ನೆಲ್ಲಾ ನೋವ ಮರೆತು.
ನಟನೆಯ ಜೀವನಕ್ಕೆ ಹೆಚ್ಚು ಬೆಲೆ
ವಾಸ್ತವ ಜೀವನದಲ್ಲಿ.
ನಿನ್ನ ಅಂತರಾಳದ ನೋವು ಕಷ್ಟಗಳಿಗೆ
ಇಲ್ಲಿ ಸಿಗುವುದಿಲ್ಲಾ ಬೆಲೆ.
ಎಷ್ಟೆಂದು ಕಳೆದುಕೊಳ್ಳುವೆ
ನಿನ್ನ ಕಣ್ಣೀರ ಹನಿಗಳನ್ನ.
ಹೇ ಮನವೆ ನೀ ನಕ್ಕುಬಿಡು
ಮತ್ಯಾರು ನಿನ್ನ ನಗು ಎಂದು
ಹೇಳದಂತೆ.
ನಿನ್ನ ನಗುವಿನಿಂದ ಅದೆಷ್ಟೋ
ನಿನ್ನ ನೋವುಗಳು ಕಣ್ಮರೆಯಾಗಿರಲಿ
ಯಾರಿಗೂ ತಿಳಿಯದಂತೆ
- varu
15 Apr 2020, 02:05 pm
Download App from Playstore: