ನನ್ನವಳು.

ಕೆನೆ ಹಾಲ ಮನದವಳಿಗೆ
ಅಕ್ಕರೆಯ ಸಕ್ಕರೆಯು
ತುಸು ಹೆಚ್ಚು ನನ್ನವಳಿಗೆ.

ನೇರಮಾತಿನ ಮಾಯಗಾತಿ
ಅವಳು,
ತುಟಿಯ ಕೊನೆಯಲಿ
ಮೌನ ಮುಡಿದವಳು.

ತಪ್ಪಿದಲ್ಲಿ ತಿದ್ದಿ ಹೇಳಿವ ತಾಯಿಯಂತ
ಮೃಧು ಸ್ವಭಾವದವಳು,
ಕತ್ತಲಿಗೆ ಅಂಜದವಳು ಬೆಳಗಿನ
ಜಾವಾದಿ ಬೆಳ್ಳಕ್ಕಿಯವಳು.

ಚಿನ್ನದ ಪಾದಕೆ ಬೆಳ್ಳಿ ಕಾಲ
ಗೆಜ್ಜೆ ತೊಟ್ಟು ನನ್ನೆದೆಯ
ಗುಡಿಯಲಿ ದೇವತೆಯಾದವಳು.

ನನ್ನವಳು ಅವಳು
ಮಾರುಮಾತನಾಡದೆ
ಎದೆಗಪ್ಪಿದ ಇರುಳು ಹಾಡುವ
ಲಾಲಿ ಹಾಡಿನಂತವಳು.

- ಚುಕ್ಕಿ

16 Apr 2020, 06:04 pm
Download App from Playstore: