ಜಗದ ಅಳಿವು ಉಳಿವು....
ಸದ್ದು ಗದ್ದಲದಿಂದ ತುಂಬಿ
ಸದಾ ಜನಜಂಗುಳಿಯಿಂದ
ತುಂಬುತ್ತಿದ ಜಾಗ ಇಗ ಎಲ್ಲವು ಕಾಲಿ ಕಾಲಿ
ಕಾಲಿ ರಸ್ಥೆಯು ಮೌನವಾಗಿ ನುಡಿಮುತ್ತೊಂದು
ನುಡಿಯುವಂತೆ ಬಾಸವಾಗುತ್ತಿದೆ
ಹೇ ಮನುಜ ಅಂದು ನೀನು ನನ್ನನ್ನು ದುರುಪಯೋಗ ಪಡಿಸಿ ಕಲೂಶಿತ ಮಾಡದಿದ್ದರೆ ಇಂದು ನೀ ನನ್ನನ್ನು ತೊರೆದು ಬದುಕುವ ಕಾಲ ಬರುತ್ತಿರಲಿಲ್ಲ ಎಂದು........
ಹೀಗೊದು ಪ್ರಕ್ರೃತಿ ಸುಂದರಾವಾಗಿ ತನ್ನಂತರಾಳದ ನೋವನ್ನು ಸಂದ್ದಿಲ್ಲದೆ ನುಡಿಯುತ್ತಿದೆ ಕೇಳಿಕೊ ಮನವೆ ನನ್ನೊಡಲ ಚಿಗುರೊಡೆಯದ ಗಿಡಮರಬಳ್ಳಿಗಳೆಲ್ಲವನ್ನು ಕಡಿದು ನನ್ನನು ನಾಶ ಪಡಿಸಿದರಲ್ಲ
ಅಂದು ನೀನು ನನ್ನನ್ನು ಕಡಿಯದೆ ಬಿಟ್ಟಿದ್ದರೆ ಇಂದು ನೀನು ನಿನ್ನೊಡಲ ಕಂದಮ್ಮಗಳು
ಈ ಕೆಟ್ಟ ಗಾಳಿಯಿಂದ ನರಕ ಅನುಬವಿಸುವಂತೆ ಎಂದಿಗು ಆಗುತ್ತಿರಲಿಲ್ಲವೆಂದು........
ಸದಾ ಸದ್ದು ಮಾಡುತ್ತ ಹರಿಯುತ್ತ ಗಂಗೆ ಇಂದು ದೂರದಲ್ಲೆ ನಿಂತು ನಗತಾ ಹೀಗೊಂದು ಮಾತೊಂದ ನುಡಿಯುತಿಹಳು
ನನ್ನಿಂದ ನೀನು ಶುದ್ದನಾಗಬೇಕು ನನ್ನನೆ ಕಲುಷಿತ ಮಾಡಿದರೆ ನೀನೆಂದಿಗು ಶುದ್ದ ನಾಗಲಾರೆ ಎಂದು
ಈಗಲಾದರು ಅರಿತುಕೊ ಇನ್ನೆಂದಿಗು ಇಂತ ಕೆಟ್ಟ ಮನಸಿಂದ ಕೆಟ್ಟ ಕೆಲಸವನ್ನು ಎಂದಿಗು ಮಾಡದಿರು
ನಿನೆಷ್ಟೆ ಕಲುಷಿತ ಮಾಡಿದರೂ ನಾನು ನನ್ನ ತನವನ್ನು ಮತ್ತೆ ಮತ್ತೆ ಪಡೆದೆ ಪಡೆಯುವೆ ಎಂದು ಈಡಿ ಪ್ರಕ್ರೃತಿಯ
ಮನುಜ ಲೋಕದಮೇಲೆ ಹೊಸದೊಂದು ಪುಟವ ತೆರೆದು ಬದುಕು ಎಂದು ಸ್ವಚ್ಚಂದವಾಗಿ ಹೇಳುತ್ತಿವೆ........
ಅರಿತರು ಅರಿಯದ್ದಿದರು ಅರಿವು ಮುಡಿಸುವುದು ಈ ಜಗದ ನಿಯಮ ಅದನ್ನು ನೀ ಪಾಲಿಸೋ ಮನುಜ........
ಒಮ್ಮೆ ಹಿಂದೆ ತಿರುಗಿ ನೋಡು ನೀ ನಡೆದು ಬಂದ ದಾರಿ ನೀನೆ ಮಾಡಿದ ಕರ್ಮಪಲವೆ ಇಂದಿನ ಉಡುಗೊರೆ ನಿನ್ನಂದಾಗಿದೆ.........
ಯಾವುದು ನಿನ್ನಂದಲ್ಲ ಯಾವುದು ನಿನ್ನಿಂದಾಗಿಲ್ಲ ಎಲ್ಲವು
ಪ್ರಕ್ರೃತಿಯ ಉಡುಗೊರೆ ಅದನ್ನು ಪಡೆದು ಗೌರವಿಸಬೇಕು
ಅದರಮೇಲೆ ಮೆಟ್ಟಿನಿಲ್ಲುವುದಲ್ಲ............ ಆಗಲೆ ಒಳ್ಳೆತನಕ್ಕೆ ಸಿಗುವ ಫಲ ಸಿಗುವುದು......... ಹೀಗೊಂದು ಪರಿ......... ಒಡಲಂತಾರಾಳದ ಮಾತು.......
- ರಾಗಸಿರಿ....
19 Apr 2020, 01:41 pm
Download App from Playstore: