ಬಡವರ ಕಣ್ಣೀರು
ಶೀರ್ಷಿಕೆ
ಬಡವರ ಕಣ್ಣೀರು
"""""""""''''''''"""""""""""""
ಗುಡಿಸಲೆಂಬ ಅರಮನೆಯಲ್ಲಿ,
ಬಡತನವೆಂಬ ಸೆರಮನೆಯಲ್ಲಿ,
ಹಸಿವು ಎಂಬ ಶಿಕ್ಷೆಯನ್ನು
ಅನುಭವಿಸುತ್ತಿರುವ
ಬಡ ಜೀವ ನಾನು.
ಹಸಿದ ಹೊಟ್ಟೆಗಿಂದು.
ಬಸಿದ ಗಂಜಿಯೂ ದೊರೆಯದೆ,
ಚಿಂದಿ ಆಯುವ ಬದುಕಾಗಿದೆ
ನನ್ನದು.
ಬಿಸಿಲ ಧಗೆಯಲ್ಲಿ ಬೆಂದು.
ಮಸಣದ ಹೊಗೆಯಂತೆ ನೊಂದು.
ಈ ಬಂಜರು ಭೂಮಿಯಲ್ಲಿ ನಿಂದು.
ಮಳೆರಾಯ ಬಾರಯ್ಯ ಎಂದು.
ಆಗಸದಿ ಅಂಗಲಾಚಿದರೇನು,
ದೊರೆಯದು ಒಂದ್ಹಿಡಿ ಮಣ್ಣು.
ಕಣ್ಣಂಚಲ್ಲಿ ಬತ್ತಿದ ಕಣ್ಣೀರು
ಮರೆಯಾಗಿ,
ಜಿನುಗುತ್ತಿದೆ ರಕ್ತದ ಹನಿಯಾಗಿ,
ಬಡವನ ಕೊರಗನ್ನು ಕೇಳಲಾರೆಯಾ ನೀ,
ಹಸಿದ ಹೊಟ್ಟೆಗೆ ಹಸಿವಿನಿಂದಲೇ
ಮರಣವೇಕಯ್ಯ.
ತನ್ನ ಮಗನ ಜೀವನ ಪ್ರಜ್ವಲವಾಗಿರಲೆಂದು,
ಹಡೆದ ನನ್ನ ತಾಯಿ ನೆನೆದರೆ,
ಬಡತನವೆಂಬ ಸುಳಿಯಲ್ಲಿ ಸಿಲುಕಿ,
ದುರ್ಬಲವಾಗುತ್ತಿರುವುದನ್ನು
ನೋಡಲಾಗದೆ ಅಸುನೀಗಿದಳು
ಅವಳು.
ಮುಂದೊಂದು ದಿನವಾದರೂ ಈ ಬಡವನಿಗೆ ದಾರಿ ಕಾಣುವುದೆಂದು,
ಅರಿತು ಮನೆಯ ಜಗಲಿಯಲ್ಲಿ
ಕುಳಿತು ಸಾವಿಗಾಗಿ ಕಾದಿರುವೆ ನಾ . . ! !
ರಚನೆ :-
ನೆನಪಿನ ನಾವಿಕ - ಸಂತೋಷ್ ಜೀತು.
- ಸಂತೋಷ್//ಜೀತು
19 Apr 2020, 01:55 pm
Download App from Playstore: