ಸಂಚಾರಿ

ಗೊತ್ತಿಲ್ಲದ ಊರಿಗೆ ಸಾಗುತಿಹನು ಸಂಚಾರಿ
ಹೋಗಬೇಡ ಎಂದು ಇಡುತಿಹಳು ಮೋರೆ ನಾರಿ
ಹೊರಟ ನಾರಿಯ ಮಾತನ್ನು ಗಾಳಿಗೆ ತೂರಿ
ಎನ್ನ ಮನೆ ಮಠವನೆಲ್ಲಾ ಮಾರಿ.

ಬದಲಾಗಿತ್ತು ಈತನ ಕಾಲ
ನಾರಿ ಮಾತು ಕೇಳಿ ಮಾಡಿದ ಸಾಲ
ಈಗಲೇ ಕೇಳ ಬೇಕೆ ತಮ್ಮ ಆಸ್ತಿಯಲ್ಲಿ ಪಾಲ
ಆದ ಅಣ್ಣ ಕೊನೆಗೆ ದಿಕ್ಕಾಪಾಲಾ.

ಮೇಲ್ಲದ ಮಾತು ಕೇಳಿ ಬಿಟ್ಟ
ನಾರಿ ಕೇಳಿದನೆಲ್ಲಾ ತಂದುಕೊಟ್ಟ
ಇದ್ದ ಊರಲ್ಲಿ ಸಾಲುಗಾರನ ಪಟ್ಟ
ಸಾಲುಗಾರರಿಗೆ ಹೆದರಿ ಪ್ರಾಣವನ್ನೇ ಬಿಟ್ಟ.

- arun

16 Jun 2016, 03:49 am
Download App from Playstore: