...ಮುದ್ದಿನ ಸೊಸೆ...

ನಿನ್ನ ಒಂದು ನೋಟ ಸಾಕು
ನನ್ನೇನೇ ನಾ ಕಳೆದು ಹೋಗಲ್ಲು
ನಿನ್ನ ಆ ನಗು ಸಾಕು
ಇಡೀ ಜಗತ್ತನ್ನೇ ನಾ ಮರೆಯಲು

ನಿನ್ನ ಒಂದು ಹೆಸರು
ಸಾಕು ನಾ ಉಸಿರಾಡಲು
ನಿನ್ನ ಮುದ್ದಾದ ಮಾತುಗಳು
ಸಾಕು ನಾ ಬದುಕಲು...

ನಿನ್ನ ಒಂದು ಸ್ವರ್ಶ ಸಾಕು
ಈ ಜನುಮ ಕಲಿಯಲು
ನಿನ್ನ ಒಂದು ಅಣತಿ
ಸಾಕು ನನ್ನನೆ ನಾ ಅಡಿಯಲು.....

ಹೇ ಮನಸ್ಸೇ ನಾ ಏನೇ
ಮಾಡಿದ್ರು ನಿನ್ನ ಪ್ರೀತಿಗಾಗಿಯೇ
ಹೇ ಪುಟ್ಟ ಮನಸ್ಸೇ ನನ್ನ ಮನಸ್ಸನ
ನೀ ಬೇಗ ಬಂದು ಸೇರುವಿಯಾ....

ಈ ಬದುಕು ನಿನ್ನಗಾಗಿ
ಬವಣೆ ನಿನ್ನಗಾಗಿ
ನನ್ನ ಪ್ರೀತಿ ಸುಳ್ಳಾದರೆ
ಈ ಜಗತ್ತೇ ಸುಳ್ಳು ಅಲ್ಲವೇ.....

ನನ್ನ ಅಮ್ಮನ ಮುದ್ದಿನ ಸೊಸೆಯೇ
ನಂದಾದೀಪವೇ ನೀ ಬಂದು ಬೆಳಗುವೆಯಾ
ನನ್ನ ಅರಮನೆಯ ದೀಪವಾ
ನೀ ಬರುವೆಂದು ನಾ ಎದುರು ನೋಡುವೆ....

- Ajay

21 Apr 2020, 04:34 pm
Download App from Playstore: