ಆನಂದಮಯ

ಆಂತರಂಗದಲ್ಲಡಗಿಹ ಆನಂದವೆಂಬ
ಜ್ಯೋತಿರ್ಮಯ ಭಾವಕೆ ಪರದೆಯ
ಹಾಕಿಕೊಳ್ಳಲೇಕೆ !

ಮತಧರ್ಮವ ಪ್ರತಿಪಾದಿಸುತ ಸ್ವಾರ್ಥ
ಲಾಲಸೆಯಲಿ ತಮದತ್ತ ಎಲ್ಲರ ತಳ್ಳುತಾ
ನೀ ಮಾತ್ರ ಸಂತಸ ಹೊಂದಬೇಕೆ !

ಅವಿದ್ಯಾವಂತರೆಂಬ ಮುಖೇಡಿನವೋ
ದರ್ಪಕ್ಕೆ ಹೆದರಿದ ಸೊಗಲಾಡಿತನವೋ ನಿನಗೆಲ್ಲರೂ ಸೇವಕರಂತಿಹರು !

‌‌‌ನಾಯಿಗಳಿಗೆ ಮೂಳೆಯೆಸೆದಂತೆ ಕಾಲಬು
ಡದಲಿರುವ ಅವರೊಂದು ದಿನ‌ ‌ಎಚ್ಚರ
ವಾದರೆ ನಿನಗೆಂದೂ ಬಾಗಲಾರರು !

ವಿದ್ಯೆಯೊಂದು ಸ್ವಾಭಿಮಾನದ ಮೆರುಗ
ಹೊದಿಸುವುದು ಎಂದೂ ತಲೆತಗ್ಗಿಸದಂತೆ
ನಡೆಯುವರವರು !!
ಶಕುಂತಲಾಮೂರ್ತಿ
"""""""""""""""""""""""""""

- Shaku Thanks Amma Shaku

21 Apr 2020, 06:42 pm
Download App from Playstore: