ನಾ ಕಂಡ ಕನಸು ನಿನೆನಾ.

ಮನಸಲ್ಲಿ ಕಂಡೆ ಕನಸೊಂದನಾ
ಅದನ್ನು ಪೂರ್ತಿಗೋಳಿಸಿದವಳು ನೀನೆನಾ!

ಅರ್ಧಂಬರ್ದ ಬೆಯ್ದ ರೊಟ್ಟಿಯನ್ನು
ಪ್ರೀತಿ ಹಂಚಿ ಊನಬಡಿಸಿದವಳು ನೀನೆನಾ!

ನಿದ್ರೆ ಬಾರದ ರಾತ್ರಿಯಲಿ
ನಿದ್ರಾದೇವತೆಯ ರೂಪದಲ್ಲಿ ಆವರಿಸಿದಳು ನೀನೆನಾ!

ಮೌನ ಆವರಿಸಿದ ಮೂಗನಿಗೆ
ಮಾತಿನ ಮಲ್ಲನೆಂದು ಕರೆದವಳು ನೀನೆನಾ!

ನನ್ನ ನಾನು ಮರೆತಾಗ
ಪ್ರಪಂಚಕ್ಕೆ ಪರಿಚಯಿಸಿದವಳು ನೀನೆನಾ!

ನನ್ನ ನಗುವ ಮಾರೆತಾಗ
ಹಾಸ್ಯ ಚಟಾಕಿ ಸಿಡಿಸಿದವಳು ನೀನೆನಾ!

ಕದ ಮುಚ್ಚಿದ ಹೃದಯದಲಿ
ಮೆಲ್ಲನೆಯ ಹೆಜ್ಜೆ ಹಾಕಿ ಬಾಗಿಲು ತೆರೆದವಳು ನೀನೆನಾ!

ನಾನಿದ್ದೆ ಏಕಾಂಗಿಯಂತೆ
ನೀ ಬಂದೆ ದೇವಿಗೆಯಂತೆ
ನಾನರಿಯೆ ನಿನೆನ್ನ ಗೆಳತಿಯೊ,ಸಂಗಾತಿಯೊ
ಅಥವಾ ಸಿಹಿ ಅಪ್ಪುಗೆಯ ಅರ್ಧಾಂಗಿಯೊ

ಪ್ರೀತಿಯ ಪ್ರತಿರೂಪದಂತಿರುವ. ತಾಜಮಹಲನ ಒಡೆಯ ನಾನಲ್ಲನಾದರು
ನೀನಾದೆ ಈ ಹೃದಯ ಮಂದಿರದ ದೇವತೆ.

- kempayya

21 Apr 2020, 11:07 pm
Download App from Playstore: