ಕಾಣದ ಭಾವನೆ
ನನ್ನ ಮನಸಿನ ಕೋಣೆಯಲಿ
ಮಾತು ಮೌನವಾಗಿದೆ
ಹೃದಯ ಪ್ರತಿ ನಿಮಿಷವು
ನಿನಗಾಗಿ ಚಡಪಡಿಸಿದೆ
ಒಮ್ಮೆ ತಿರುಗಿ ಬರಬಾರದೇ
ಹೋದ ದಾರಿಯಲಿ
ಅತ್ತು ಕರೆದರು ಬರಲಾರೆ
ಮರಳಿ ಎಂದೆಂದೂ
ಕಾದು ಕಾದು ಬೇಸತ್ತು
ಇರುವ ಸಮಯವು ಇಂದು
ಮುಂದೆಯೂ ಸಾಗಲೂ ಆಗದೆ
ಹಿಂದೆಯೇ ಕುಳಿತಿದೆ ಬೆಪ್ಪಾಗಿ
ಜೀವನ ಇಲ್ಲಿಗೆ ಮುಗಿದ
ಆಗಿದೆ ನೀನ್ ಇಲ್ಲದೆ
ಇರುವ ದಿವಸವು ನನ್ನನ್ನು
ಹಿಂಬಾಲಿಸಿ ಕೊಲ್ಲುತಿದೆ
ಕಾರಣವಿಲ್ಲದೆ ನಿ ಹೋದೆ
ನನ್ನ ಬಿಟ್ಟು ಅಂದು
ಯಾರ ಮಾತಿಗೆ ಭಯಬಿದ್ದು
ಕಾಣೆಯಾದೆ ನೀ
ಕಳೆದ ಸಮಯವು ನಿನ್ನಲ್ಲಿ
ಮತ್ತೆ ಮತ್ತೆ ಕಾಡುತಿದೆ
ನೆನಪು ಅಳಿಸಲು ಆಗದಾಗೆ
ಬರೆದು ಹೋದೆ ನೀನು
ಇನ್ನಾದರು ದಿನವನು ನಾ
ಕಣ್ಣೀರಲಿ ಕಳೆಯದಂತೆ
ಎಲ್ಲವನ್ನು ಒಂದು ಕನಸೆಂದು
ಮರೆಯಲು ಪ್ರಯತ್ನಿಸುವೆನು.
- azna
22 Apr 2020, 09:33 am
Download App from Playstore: