ಹುಡುಕಿ ಕೊಡು ನನ್ನವ್ವನ
ಯಾರೋ ಮಾಡಿದ ತಪ್ಪಿಗೆ
ನಮಗೇಕೆ ಶಿಕ್ಷೆ
ತಿನ್ನಲು ಒಪ್ಪತ್ತಿನ ತುತ್ತಿಗೆ
ಬೇಡುವಂತಾಗಿದೆ ಭಿಕ್ಷೆ
ಅಮ್ಮನ ಕಂಡಿಲ್ಲ
ಅಪ್ಪನ ಭುಜವಿಲ್ಲ
ಅಕ್ಕನ ಅಕ್ಕರೆಯಿಲ್ಲ
ಅಜ್ಜಿಯ ಕಥೆಯಿಲ್ಲ
ಬೇಡಿಕೆಯೊಂದೇ ನಮ್ಮಲ್ಲಿ
ಕರುಣೆಯೇ ಇಲ್ಲವೇ ನಿನ್ನಲ್ಲಿ
ಹಣವಂತರು ಸಮವಿಲ್ಲದೆ
ಹಾಕುವರು ಅಮ್ಮನನ್ನ ಆಶ್ರಮಕ್ಕೆ
ದುಡಿದು ಕೊಡುವೆ ನಿನಗೆ ದೇವರೇ
ಬೇಕಾದಷ್ಟು ಹಣವ
ಹುಡುಕಿ ಕೊಡುವೆಯ ಕಾಣೆಯಾದ
ನನ್ನವ್ವನನ್ನ?
- ಸತೀಶ್ ಕುಮಾರ್ ಕಳುವರಹಳ್ಳಿ
22 Apr 2020, 03:05 pm
Download App from Playstore: