ಕನ್ನಡ...
ಹಾಯ್, ಹಲೋ ಪರದೇಶಿ ವ್ಯಾಮೋಹ ಬಿಡಿ.
ಯಾವ್ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ನುಡಿ.
ಕನ್ನಡ ನಾಡು ಎಂದಿಗೂ ಮರೆಯಲಾಗದ ಗಂಧದ ಗುಡಿ.
ಏನೇ ಬಂದರೂ ನೀ ಕನ್ನಡಕ್ಕಾಗಿಯೇ ಮಡಿ.
ಕನ್ನಡವ ಎಂದಿಗೂ ಹೃದಯದಲ್ಲಿಯೇ ಸೇರೆ ಹಿಡಿ.
ಕಾವೇರಿಯನ್ನು ಕಣ್ಣೀಗೋತ್ತಿ ಕೈ ಮುಗಿದು ಕುಡಿ.
ಕನ್ನಡತಾಯಿಯ ತಲೆ ಮೇಲೆ ಹೋತ್ತು ನಡಿ.
ಕನಸು ಕಾಣುವಾಗಲು ಕನ್ನಡವನ್ನೇ ಮಿಡಿ.
ಉಸಿರೋದರು ಕಾಯಿ ನೀ ಕನ್ನಡದ ಗಡಿ.
ಅರಿಶಿಣ-ಕುಂಕುಮ ಎಷ್ಟು ಚೆಂದ ಕನ್ನಡಕ್ಕೆ ನೋಡಿ.
ಮಾಡಿಹುದು ಕನ್ನಡಿಗರ ಮನಸ ಮೋಡಿ.
ಕನ್ನಡಕ್ಕೆ ಅವಮಾನವಾದರೆ ಎದ್ದು ನಿಲ್ಲವುದು ಹೃದಯದ ನಾಡಿ.
ಕನ್ನಡ ಯಾವಾಗಲೂ ಬೆಂಕಿಯ ಕಿಡಿ.
ಕರ ಮುಗಿದು ಹೇಳುವೆ ನಾನೆಂದಿಗೂ ಕನ್ನಡದ ಕುಡಿ....
- Chaitra Kulkarni
25 Apr 2020, 12:41 pm
Download App from Playstore: