...................?
ಕನಸಿನಲ್ಲಿ ನೀನು ಬಂದಂತೆ
ಕಣ್ಣಿನಲ್ಲೇ ನೀನು ಕರೆದಂತೆ
ಕಿವಿಯಲ್ಲೇನೋ ಪಿಸು ನುಡಿದಂತೆ
ನಗುವೇ ಯಾಕೆ ಏನು ತಿಳಿಯದಂತೆ
ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಕೈ ಹಿಡಿದು
ಬರೆಯುವೆನು ಕಾಗದದ ಮೇಲೆ
ನನ್ನ ಎಲ್ಲಾ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ
ಅಪ್ಪಿ ಬಿಡು ನೀ ಒಪ್ಪಿದರೆ
ಹೃದಯ ಬರೆದ ಕವನ ಸಂಕಲನಕ್ಕೆ
ನಿನ್ನ ಮೌನವೇ ಮುನ್ನುಡಿ...
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೆ ಪುಟವಿಡಿ
Written By:-MS ಯಾದವ್.
- M S Yadav
25 Apr 2020, 03:02 pm
Download App from Playstore: