ಧ್ಯೇಯವಿಲ್ಲದ ಅಧ್ಯಾಯದಲ್ಲಿ
ಅಲೆದಾಡುತಿದೆ ಮನ
ಕಾಣದ ಬಿಂದುವಿನ ಹಿಂದೆ
ತಲುಪುವ ದಾರಿ ತಿಳಿಯದೆ
ಕಳೆದುಕೊಂಡು ಬಹಳ
ದೂರ ಬಹುದೂರ ಸಾಗಿದೆ
ಮರೆಯಾಗಿ ಮರೆಮಾಚಿ
ಸುಮ್ಮನೆ ಓಡಿದೆ ನಿಲ್ದಾಣವಿಲ್ಲದೆ
ತಿರುಗಿದರೂ... ಮರುಗಿದರೂ...
ದೊರಕದು ಸಾಕ್ಷಾತ್ಕಾರ
ಅರ್ಥವಾಗದೆ ಗರಬಡಿದು
ಕಾಲ ಕಳೆದಿದೆ ಸಿಗದೆ ನೆರಳು
ದುರುಪಯೋಗವಾದ ಬಲಹೀನತೆ
ಎಡ,ಬಲ ಮೇಲೆ, ಕೆಳಗೆ
ಸುತ್ತಮುತ್ತಲೂ...ಬಾಚಲಿಲ್ಲ; ಕೈ ಚಾಚಲಿಲ್ಲ
ಧ್ಯೇಯವಿಲ್ಲದ ಅಧ್ಯಾಯದಲ್ಲಿ ಜೀವ, ಬಡಜೀವ
- mahadeva kc
26 Apr 2020, 10:07 pm
Download App from Playstore: