ಕಣ್ಣೀರ ಕೋಡಿ. . .

ಒಬ್ಬಂಟಿಯಾಗಿ ಕುಳಿತಿರುವೆ ನಾನು,
ಕಟ್ಟಲು ಯತ್ನಿಸುತಾ ಕಣ್ಣೀರಿಗೆ ಅಣೆಕಟ್ಟನು, ಎಷ್ಟು ತಡೆದರೂ ನಿಲ್ಲದು ಕಣ್ಣೀರ ಧಾರೆ,
ಅದಕೆ ಕಾರಣ ನಿನ್ನ ಅಗಲಿಕೆಯೆ ನೀರೆ,
ನೀ ಬಂದು ಸೇರಲಾರೆಯಾ ನನ್ನ,
ಕಣ್ಣೀರೆಲ್ಲಾ ಬತ್ತಿ ಬರಡಾಗುವಾ ಮುನ್ನ,
ಕಳಿಸಿರುವೆ ಕಣ್ಣೀರ ಹೊಳೆಯಾ ನಿನ್ನ ತವರ ಅಂಗಳಕೆ, ಅದ ನೋಡಿ ಓಡೋಡಿ ಬಾ,
ಓ ನನ್ನ ಬಾಳ ಬೆಳಕೆ...

- tippu

17 Jun 2016, 03:56 pm
Download App from Playstore: