ಕನಸ್ಸಲ್ಲು ನನಸ್ಸಲ್ಲು
ಕನಸ್ಸಲ್ಲು ನನಸ್ಸಲ್ಲು ಅವಳ್ದೆ ಧ್ಯಾನ
ಈ ಮನಸಿಗಿಲ್ಲ ಒಂಚೂರು ಸಮಾಧಾನ...
ಅವಳಿಗೆ ಮೈತುಂಬ ಬಿಗುಮಾನ
ಅವಳಿಲ್ದೆ ಹೇಗೆ ನನ್ನ ಜೀವನ...?
ಎಷ್ಟಂತ ಬರೆಯಲಿ
ಅವಳ ಮೇಲೆನೆ ಹನಿಗವನ...?
ಅವಳೇ ಒಲಿಯದಿದ್ದ್ರೆ
ಆಗೋದ್ಯಾಗೆ ನನ್ನ ಪ್ರೀತಿ ಪಾವನ...?
ಇರೋ ಪ್ರೀತಿನ್ಯಾಕೆ ಮರೆಮಾಚಿದೆ
ಆಕೆಯ ತುಂಟ ನಯನ?
ಉತ್ತರಿಸಲಾಗದ ಪ್ರಶ್ನೆಗಳನ್ನೇ
ಕೇಳೊದ್ಯಾಕೆ ನನ್ನೀ ಹುಚ್ಚು ಮನ?
ಆಕೆಯ ಉತ್ತರಕ್ಕಾಗಿ ಕಾದು
ಕಳೆದೋಯ್ತು ನನ್ನ ಯೌವ್ವನ...
ಆಕೆ ಖುಷಿಯಿಂದಲೇ ಬರೆದಳಾ
ಮನೆಮದ್ವೆಗೆ ಮೌನ ಚರಣ...?
ಆಕೆ ನನಗೆ ಪ್ರಶ್ನೆಯಾಗೆ ಉಳಿದು
ಪ್ರಾರಂಭಿಸಿದಳು ಹೊಸ ಜೀವನ...
ಅವಳ ವಿರಹ ವೇದನೆಯಲ್ಲೇ
ನಾ ಸೇರಿದೆ ಸತ್ತ ಕವಿತೆಗಳ ಮಸಣ...
- Manoj nj Manoj
30 Apr 2020, 09:37 pm
Download App from Playstore: