...ನಾನೊಬ್ಬ ಬಡವ...
ನಾ ಹೇಳಿದ ಸತ್ಯವ ಸುಳ್ಳೆಂದರು ಅವನೇಳಿದ ಸುಳ್ಳನ್ನೇ ನಿಜವೆಂದರು ನಾ ಏನ ಮಾಡಲಿ...? ನಾನೊಬ್ಬ ಬಡವ!(೧)
ನಾ ಓಡಿದೆನು ಹೊಟ್ಟೆಯ ತುಂಬಿಸಲು
ಅವ ಓಡಿದನು ಹೊಟ್ಟೆಯ ಕರಗಿಸಲು ನಾ ಏನ ಮಾಡಲಿ...? ನಾನೊಬ್ಬ ಬಡವ!(೨)
ನಾ ನಿದ್ದೆಯ ಮಾಡಿದೆ ಖಾಲಿ ಪಾತ್ರೆಯೊಂದಿಗೆ
ಅವ ನಿದ್ದೆಯ ಮಾಡಿದ ನಿದ್ದೆ ಮಾತ್ರೆಯೊಂದಿಗೆ
ನಾ ಏನ ಮಾಡಲಿ...? ನಾನೊಬ್ಬ ಬಡವ!(೩)
ನಾ ನಕ್ಕಾಗ ನೋಡಿದರು ಕೋಪದಿಂದ
ಅವ ನಕ್ಕಾಗ ನೋಡಿದರು ಅಕ್ಕರೆಯಿಂದ
ನಾ ಏನ ಮಾಡಲಿ...? ನಾನೊಬ್ಬ ಬಡವ!(೪)
ನನ್ನ ಮುಚ್ಚಿದರು ಮಣ್ಣಿನೊಳಗೆ
ಅವನನ್ನೂ ಮುಚ್ಚಿದರು ಅದೇ ಮಣ್ಣನೊಳಗೆ
ಹೇಳಿದೆವು *ನಾವಿಬ್ಬರು*
ನಾ ಏನ ಮಾಡಲಿ...? ನಾನೊಬ್ಬ ಬಡವ!(೫)
✍
- ಅಬುರಯ್ಯಾನ್,ಹಂಡೇಲು
05 May 2020, 05:07 pm
Download App from Playstore: