ಜೀವನ ಕ್ರಮ

ಹಸಿವೆ ನೀಗಿಸಲು
ಅನ್ನವು ಬೇಕಲ್ಲ
ಅನ್ನವ ಪಡೆಯಲು
ಕೆಲಸವಿರಲೇ ಬೇಕಲ್ಲ

ಮಾಲೀಕ ಕಾರ್ಮಿಕ
ಇಬ್ಬರೂ ಒಂದೇ
ಕೆಲಸ ಮಾಡದೆ ಅವಂಗೆ
ಬದುಕೇ ಇಲ್ಲ.

ಮಾಲೀಕ ತಾ ಮಿಗಿಲು
ಸೇವಕ ತಾ ಕೀಳು
ಕಸುಬಿಗೆ ಅದು
ಎಂದೂ ಗೊತ್ತಿಲ್ಲ.

ಮಾಡುವ ಕಾರ್ಯದಿ
ಶ್ರದ್ಧೆ ನಿಷ್ಠೆ ತೋರಲು
ಗೌರವ ಸನ್ಮಾನ
ಒಲಿದು ಬರುವುದು ಸುಳ್ಳಲ್ಲ.

ನಿನಗೊಲಿದ ಕಾಯಕ
ನಿನಗದು ಶ್ರೇಷ್ಠ
ಕೂಲಿಯೊ ನಾಲಿಯೊ
ಅವಮಾನ ನಿನಗಿಲ್ಲ

ಅವರಿವರ ಎಣಿಸದೆ
ನಿನ್ನ ಕಾಯಕ ಪೂಜಿಸಲು
ನಿನ್ನಂಥ ಕಾರ್ಮಿಕ
ಬೇರೆಲ್ಲೂ ಸಿಕ್ಕಲ್ಲ..

ಕಾಯವು ಚಿಕ್ಕದು
ಕಾಯವು ದೊಡ್ಡದು
ಕಾಯಕದಲ್ಲಿ ಎರಡಿಲ್ಲ
ಅರಿತರೆ ನಿನಗೆ ಸೋಲಿಲ್ಲ.

- Ravinayaknayak

06 May 2020, 09:18 pm
Download App from Playstore: